
ಬಂಟ್ವಾಳ: ಜೆಸಿಐ ವಲಯ 15ರ ಪ್ರತಿಷ್ಠಿತ ಘಟಕ ಜೆಸಿಐ ಬಂಟ್ವಾಳದ 2026ನೇ ಸಾಲಿನ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಆಚಾರ್ಯ ಆಯ್ಕೆಯಾಗಿದ್ದಾರೆ. ಘಟಕದ ಅಧ್ಯಕ್ಷ ಗಣೇಶ್ ಕೆ. ಕುಲಾಲ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಾಸಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಬಂಟ್ವಾಳ, ಕೋಶಾಧಿಕಾರಿಯಾಗಿ ಶಿವರಾಮ ಮರ್ತಾಜೆ, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಶ್ರೀನಿವಾಸ ಅರ್ಬಿಗುಡ್ಡೆ, ರವಿರಾಜ್, ಡಾ. ಅಶ್ವಿನಿ ಬಾಲಕೃಷ್ಣ, ರವೀಣ ಬಂಗೇರ, ವೆಂಕಟೇಶ್ ಕೃಷ್ಣಪುರ, ಲೇಡಿ ಜೇಸಿ ಸಂಯೋಜಕಿಯಾಗಿ ಅನುಷಾ ಕಿಶೋರ್ ಆಚಾರ್ಯ ಆಯ್ಕೆಯಾಗಿದ್ದಾರೆ.


ಜ.3ರಂದು ಪ್ರದಗ್ರಹಣ:
ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.3ರಂದು ಶನಿವಾರ ಬಿ.ಸಿ.ರೋಡಿನ ರೈಲು ನಿಲ್ದಾಣದ ಬಳಿ ಇರುವ ರೊ| ಬಿ.ಎ. ಸೋಮಯಾಜಿ ಮೆಮೋರಿಯಲ್ ರೋಟರಿ ಸಭಾಭವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಮಾರ್ನಬೈಲ್, ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಭಾಗವಹಿಸುವರು. ಅಭ್ಯಾಗತರಾಗಿ ಕೊಡಂಗೆ ಸರಕಾರಿ ಶಾಲೆಯ ಶಿಕ್ಷಕಿ ಗೀತಾ, ವಲಯ ಉಪಾಧ್ಯಕ್ಷ ಕಾಶಿನಾಥ ಗೋಗಟೆ ಉಪಸ್ಥಿತರಿರುವರು.
Advertisement







