
ಬಂಟ್ವಾಳ : ಕಲ್ಲಡ್ಕದ ವಜ್ರಕಾಯ ಫ್ರೆಂಡ್ಸ್ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವವನ್ನು ಕಲ್ಲಡ್ಕ ಸತ್ಯದೇವತಾ ಗುಡಿಯ ಬಳಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.


ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಡಂತಾಯ ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣವನ್ನು ನೆರವೇರಿಸಿದರು. ಅವರು ಮಾತನಾಡಿ ನಮ್ಮದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಕೇವಲ 62 ವರ್ಷದ ಇತಿಹಾಸ ವಿರುವುದಲ್ಲ.. ಬದಲಾಗಿ ಈ ದೇಶಕ್ಕೆ ಅಲೆಕ್ಸಾಂಡರ್ ಕ್ರಿ.ಪೂ.327 ದಾಳಿ ಮಾಡಿದಾಗ ಅವನನ್ನು ಎದುರಿಸಿದಂತಹ ಪುರೂರವನಿಂದ ಇಲ್ಲಿಯವರೆಗೆ ಸಾವಿರಾರು ವರ್ಷಗಳ ಕಾಲ ಅನೇಕ ಮಂದಿ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು.


ಅತಿಥಿಗಳಾಗಿ ರತ್ನಾಕರ ಶೆಟ್ಟಿ ಕಲ್ಲಡ್ಕ , ಕೃಷ್ಣಪ್ಪ ಕುಲಾಲ್ ಕಲ್ಲಡ್ಕ ಜನಾರ್ಧನ್, ಚೇತನ್ ಟೈಲರ್, ದಾಮೋದರ್ ಪಂಡಿತ್, ನಾರಾಯಣ ಬಂಡಾರಿ, ಪ್ರೇಮ, ಲೀಲಾವತಿ, ಲಕಿತಾ ಆರ್ ಶೆಟ್ಟಿ ಪಾಲ್ಗೊಂಡಿದ್ದರು. ವಜ್ರಕಾಯ ಫ್ರೆಂಡ್ಸ್ ನ ಪ್ರಮುಖರಾದ ವಿಜ್ಞೇಶ್ ಕುಲಾಲ್, ಸತೀಶ್, ಹೊನ್ನಪ್ಪ ದಯಾನಂದ, ಸದಾನಂದ, ತಿಲಕ್ ಕಿರಣ್, ಧನಂಜಯ ಮೊದಲಾದವರು ಉಪಸ್ಥಿತರಿದ್ದರು . ಜಗದೀಶ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ್ ಆಚಾರ್ಯ ವಂದಿಸಿದರು



Advertisement







