
ಬಂಟ್ವಾಳ: ಮಂಗಳೂರಿನ ವಾಮಂಜೂರ್ ಚರ್ಚ್ ಹಾಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ನಾಲ್ಕು ಕಂದಾಯ ಜಿಲ್ಲೆಯೆಗನ್ನೊಳಗೊಂಡ ಲಯನ್ಸ್ ಜಿಲ್ಲೆ 317ಡಿ ಇದರ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಪ್ರತಿಷ್ಠಿತ ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ “ತೃತೀಯ ಅತ್ಯುತ್ತಮ ಕ್ಲಬ್ ಪ್ರಶಸ್ತಿ” ಲಭಿಸಿರುತ್ತದೆ. ವರ್ಷವಿಡೀ ಸಂಯೋಜಿಸಿದ ಆಡಳಿತಾತ್ಮಕ ಕಾರ್ಯಕ್ರಮಗಳು, ನಿರಂತರ ಸೇವಾ ಕಾರ್ಯಕ್ರಮಗಳು, ದೇಣಿಗೆಗಳು, ಶಾಶ್ವತ ಯೋಜನೆಗಳು, ಸಾರ್ವಜನಿಕ ಸಂಪರ್ಕ ಜನಸ್ನೇಹಿ ಕಾರ್ಯಕ್ರಮಗಳ ಸಂಯೋಜನೆಯಿಂದ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ. ಲಯನ್ಸ್ ಜಿಲ್ಲೆಯ ರಾಜ್ಯಪಾಲರಾದ ಲಯನ್ ಭಾರತಿ ಬಿ ಎಂ ಪ್ರಶಸ್ತಿ ನೀಡಿದ್ದು, ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ, ಕಾರ್ಯದರ್ಶಿ ದೇವಿಕಾ ದಾಮೋದರ್ , ಕೋಶಾಧಿಕಾರಿ ದೇವಪ್ಪ ಪೂಜಾರಿ ಮತ್ತು ಕ್ಲಬ್ ಸದಸ್ಯರುಗಳು ಜತೆಯಾಗಿ ಈ ಗೌರವ ಸ್ವೀಕರಿಸಿದರು.

ಲಯನ್ಸ್ ಜಿಲ್ಲೆಯ ಪೂರ್ವ ರಾಜ್ಯಪಾಲರಾದ ವಸಂತ ಕುಮಾರ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀನಿವಾಸ್ ಪೂಜಾರಿ, ಸಂಪುಟ ಸದಸ್ಯರಾದ ಜಗದೀಶ್ ಎಡಪಡಿತ್ತಾಯ, ನಿಯೋಜಿತ ಅಧ್ಯಕ್ಷರಾದ ರೋಹಿತಾಶ್ವ , ನಿಯೋಜಿತ ಕೋಶಾಧಿಕಾರಿ ರಾಮಕೃಷ್ಣ ರಾವ್, ಸದಸ್ಯರುಗಳಾದ ಮುಕುಂದ್ ಪ್ರಭು, ತಪೋದನ್ ಶೆಟ್ಟಿ , ಮ್ಯಾಕ್ಸಿಮ್ ಸಿಕ್ಯುರಾ , ಓಮಯ್ಯ ಕೋಟ್ಯಾನ್, ಕಿರಣ್ ಕುಮಾರ್, ಮಾಧವ ಮಾರ್ಲಾ , ಪ್ರಮೀಳಾ ಶ್ರೀನಿವಾಸ್, ಜಯಂತಿ ಎಂ ಪ್ರಭು, ಚಿತ್ರಾ ಎಡಪಡಿತ್ತಾಯ, ದಿವ್ಯಾರಾಣಿ , ಲಿಯೋ ಕಾರ್ಯದರ್ಶಿ ಪೂರ್ವಿಕ್ ಆರ್ ಕೆ ಮತ್ತಿತರರು ಉಪಸ್ಥಿತಿಯಿದ್ದರು.


Advertisement







