
ಬಂಟ್ವಾಳ: ಏರ್ಯ ಆಳ್ವ ಫೌಂಡೇಷನ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಇದರ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ ಸಾಂಸ್ಕೃತಿಕ ಕಮ್ಮಟ ಜು.27ರಂದು ಆದಿತ್ಯವಾರ ಏರ್ಯಬೀಡು ಮನೆಯಲ್ಲಿ ನಡೆಯಲಿದ್ದು ಇದರ ಅಂಗವಾಗಿ ಮಿನಿಕಥೆ ರಚನಾ ಸ್ಪರ್ಧೆ ಹಾಗೂ ಕವನ ಸ್ಪರ್ಧೆ ನಡೆಯಲಿದೆ.
ಮಿನಿಕಥೆ ರಚನೆಗೆ 100 ಪದಗಳ ಒಳಗಿನ ಸ್ವರಚಿತ ಕಥೆಯಾಗಿರಬೇಕು. ಕವನ ಸ್ಪರ್ಧೆಗೆ ಪ್ರಾಥಮಿಕ ವಿಭಾಗಕ್ಕೆ ಬಾಲ್ಯ, ಪ್ರೌಢ ವಿಭಾಗಕ್ಕೆ ಪ್ರಕೃತಿ, ಕಾಲೇಜು ವಿಭಾಗಕ್ಕೆ ಕಾಮನ ಬಿಲ್ಲು ಎನ್ನುವ ವಿಷಯವನ್ನು ನೀಡಲಾಗಿದ್ದು ಸ್ಪರ್ಧಾಳುಗಳು ಜು.24ರೊಳಗಾಗಿ ತಮ್ಮ ಕಥೆ ಹಾಗೂ ಕವನವನ್ನು ದಾಮೋದರ್ ಏರ್ಯ ಇವರ ದೂರವಾಣಿ ಸಂಖ್ಯೆ 9449645537ಗೆ ಕಳುಹಿಸಿ ಕೊಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Advertisement







