
ಬಂಟ್ವಾಳ: ಪುತ್ತೂರಿನ ಕಬಕ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯಅರುಣ್ ಬೋರುಗುಡ್ಡೆ ಹಾಗೂ ಅವರ ಮಗ ಧ್ಯಾನ್ ಮೃತಪಟ್ಟಿದ್ದಾರೆ. ತನ್ನ ಬೈಕ್ ನಲ್ಲಿ ಮಗನೊಂದಿಗೆ ಮದುವೆ ಕಾರ್ಯಕ್ರಮನಿಮಿತ್ತ ಪುತ್ತೂರು ಕಡೆಗೆ ಹೋಗುತ್ತಿದ್ದಾಗ ಕಬಕದ ಕುವೆಹಿತ್ತಿಲು ಎಂಬಲ್ಲಿ ಕೆಎಸ್ಆರ್ ಟಿಸಿ ಬಸ್ಸು ಡಿಕ್ಕಿಯಾಗಿ ಈ ದುರ್ಘಟನೆನಡೆದಿದೆ. ಅರುಣ್ ಸ್ಥಳದಲ್ಲೇ ಮೃತಪಟ್ಟರೆ ಬೈಕ್ ನ ಹಿಂಬದಿ ಸವಾರನಾಗಿದ್ದ ಪುತ್ರ ಧ್ಯಾನ್ ಗಂಭೀರ ಗಾಯಗೊಂಡಿದ್ದುಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ನರಿಕೊಂಬು ಪಂಚಾಯತ್ ಸದಸ್ಯರಾಗಿರುವಇವರು ಇತ್ತೀಚೆಗಷ್ಟೇ ಬಂಟ್ವಾಳದ ಸಮಾಜ ಸೇವಾ ಸಹಕಾರಿ ಸಂಘದ ಸದಸ್ಯರಾಗಿ ಚುನಾಯಿತರಾಗಿದ್ದರು.

ಬಂಟ್ವಾಳ ತಾಲೂಕು, ಹಾಗೂ ನರಿಕೊಂಬು ಕುಲಾಲ ಸಂಘ ಸಹಿತ ಇನ್ನಿತರ ಸಂಘಟನೆಯಲ್ಲಿ ಸಕ್ರಿಯರಾಗಿದ್ದರೆ. ಧ್ಯಾನ್ ಸ್ಥಳೀಯ ಶಾಲೆಯಲ್ಲಿ 10 ನೇತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಅರುಣ್ ಬೋರುಗುಡ್ಡೆ ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ
Advertisement







