

ಬಂಟ್ವಾಳ: ಸರಕಾರದ ಸೌಲಭ್ಯಗಳು ಕಾರ್ಯರೂಪಕ್ಕೆ ಬರ ಬೇಕಾದರೆ ಸೇವಾಂಜಲಿಯಂತಹ ಸ್ಥಳೀಯ ಸಂಘ ಸಂಸ್ಥೆಗಳ ನಿಸ್ವಾರ್ಥ ಸೇವೆಯಿಂದ ಮಾತ್ರ ಸಾಧ್ಯ. ಭಾರತ ಉದ್ಧಾರವಾಗಬೇಕಾದರೆ ಯೋಜನೆಗಳನ್ನು ಡೆಲ್ಲಿಯಲ್ಲಿ ಮಾಡಿದರೆ ಮಾತ್ರ ಸಾಲುವುದಿಲ್ಲ, ಅದು ಹಳ್ಳಿ ಹಳ್ಳಿಗೂ ತಲುಪಿ, ಎಲ್ಲರೂ ಕೈ ಜೋಡಿಸಿದಾಗ ಸಾಧ್ಯವಾಗುತ್ತದೆ ಎಂದು ದೇರಳಕಟ್ಟೆಯ ಜ.ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್ ಡಾ. ಸುಮಲತಾ ಆರ್. ಶೆಟ್ಟಿ ಹೇಳಿದರು.
ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಶನಿವಾರ ಕ್ಷಯರೋಗಿಗಳಿಗೆ ಆಹಾರ ದವಸಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ಕ್ಷಯ ಮುಕ್ತ ಭಾರತ ನಮ್ಮ ಪ್ರಧಾನಿಯವರ ಕನಸು. ಅದು ಸಾಕಾರಗೊಳ್ಳಬೇಕಾದರೆ ಕೇವಲ ಕ್ಷಯ ರೋಗಿಗಳು ಮಾತ್ರವಲ್ಲದೆ ಸಾರ್ವಜನಿಕರು, ಸಂಘಟನೆಗಳು, ಆಶಾಕಾರ್ಯಕರ್ತೆಯರು ಜೊತೆಗೂಡಬೇಕು. ಕ್ಷಯ ರೋಗಳ ಸಂಖ್ಯೆ ಕಡಿಮೆಯಾಗಿ ಶೂನ್ಯಕ್ಕೆ ತಲುಪಬೇಕು ಎಂದು ಆಶಿಸಿದರು.
ಉದ್ಯಮಿ ವಿನಯ್ ಎನ್. ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ಷಯ ರೋಗದಿಂದ ಮುಕ್ತವಾಗಲು ಔಷದ ತುಂಬಾ ಮುಖ್ಯ ಅದರ ಜೊತೆಗೆ
ಸರಿಯಾದ ಆಹಾರ ಸೇವನೆಯೂ ಅಗತ್ಯ. ವೈದ್ಯರು ಘೋಷಿಸುವವರೆಗೆ ರೋಗಿಗಳು ಔಷಧಿಯನ್ನು ಸೇವಿಸಬೇಕು ಎಂದರು. ಆಶಾ ಕಾರ್ಯಕರ್ತರಿಂದ ವೈದ್ಯಕೀಯ ಸೇವೆಗಳು ಇಂದು ಮನೆ ಮನೆಗೆ ತಲುಪುತ್ತಿದೆ. ಕ್ಷಯ ಮುಕ್ತಗೊಳಿಸಲು ಸರಕಾರ ಪ್ರಯತ್ನಿಸುತ್ತಿದ್ದು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.


ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ 31 ತಿಂಗಳುಗಳಿಂದ ನಿರಂತರವಾಗಿ ಈವರೆಗೆ ಒಟ್ಟು 156 ಮಂದಿ ಕ್ಷಯರೋಗಿಗಳಿಗೆ 6 ತಿಂಗಳುಗಳ ಕಾಲ ಆಹಾರದ ಕಿಟ್ ವಿತರಿಸಲಾಗಿದೆ, ಸುಮಾರು 10 ಲಕ್ಷ ರುಪಾಯಿಗಳನ್ನು ದಾನಿಗಳ ಸಹಕಾರದಿಂದ ಈ ಯೋಜನೆಗ ವ್ಯಯಿಸಲಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಸೇವಾಂಜಲಿ ಆರೋಗ್ಯ ಕೇಂದ್ರದ ಡಾ. ಚೇತನ್, ಸೇವಾಂಜಲಿಯ ಸಾರಾ ಮೊಯ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖರಾದ ಕೃಷ್ಣ ತುಪ್ಪೆಕಲ್ಲು, ನಾರಾಯಣ ಬಡ್ಡೂರು
ಸುರೇಶ್ ರೈ ಪೆಲಪಾಡಿ, ಆರ್. ಎಸ್. ಜಯ, ಪ್ರಶಾಂತ್ ತುಂಬೆ, ಬಾಲಕೃಷ್ಣ ರೈ, ಪದ್ಮನಾಭ ಕಿದೆಬೆಟ್ಟು, ದಿನೇಶ್ ಶೆಟ್ಟಿ ಕೊಟ್ಟಿಂಜ, ಮಧುರಾಜ್ ಶೆಟ್ಟಿ, ಕೇಶವ ದೋಟ
ಕೃಷ್ಣಪ್ಪ ದೋಟ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾನ್ ಕಾರ್ಯಕ್ರಮ ನಿರೂಪಿಸಿದರು.
Advertisement







