ಬಂಟ್ವಾಳ: ನಾಗರಿಕ ಅಭಿನಂದನಾ ಸಮಿತಿ ತುಂಬೆ ಇದರ ವತಿಯಿಂದ ತುಂಬೆ ಗ್ರಾ.ಪಂ.ನ ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಬಿ. ತುಂಬೆ ಅವರಿಗೆ ಅಭಿನಂದನಾ ಸಮಾರಂಭ ತುಂಬೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆಯಿತು.
ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಭಾಗವಹಿಸಿ ಮಾತನಾಡಿ ಮನುಷ್ಯನ ಉತ್ತಮ ಗುಣಕ್ಕೆ ಮತ್ಸರ ಪಡಬಾರದು. ಪ್ರವೀಣ್ ತುಂಬೆ ಪಕ್ಷೇತರರಾಗಿ ಸ್ಪರ್ಧಿಸಿ, ಅಧ್ಯಕ್ಷರಾಗಿ ಯಶಸ್ವಿಯಾಗಿ ಅಧಿಕಾರ ನಿಭಾಯಿಸಿ ಗ್ರಾ.ಪಂ.ಗೆ ಒಳ್ಳೆಯ ಹೆಸರು ಬರಲು ಕಾರಣರಾಗಿದ್ದಾರೆ. ಪ್ರತಿ ಕೆಲಸಗಳಿಗೂ ಒತ್ತು ನೀಡಿ ಎಲ್ಲರನ್ನೂ ಸಮಾನ ಭಾವದಿಂದ ಕಂಡು ಜನರ ಸೇವೆ ಮಾಡಿದವರು ಎಂದು ತಿಳಿಸಿದರು.
ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರೆ| ಫಾ| ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಪ್ರವೀಣ್ ಬಿ. ತುಂಬೆ ಅವರು ನೇರ ನಡೆ ನುಡಿಯ ವ್ಯಕಿತ್ವದವರಾಗಿದ್ದು ಗ್ರಾಮದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸಿದರು. ಅವರ ಅವಧಿಯಲ್ಲಿ ತುಂಬೆ ಗ್ರಾಮ ಸ್ವಚ್ಚ ಗ್ರಾಮವಾದಂತೆ ಮುಂದಿನ ದಿನಗಳಲ್ಲಿ ಸೌಹಾರ್ದ ಗ್ರಾಮವೂ ಆಗಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಪ್ರವೀಣ್ ಬಿ. ತುಂಬೆ ಅಭಿನಂದನೆ ಸ್ವೀಕರಿಸಿ ಮಾತನಾಡಿ ಗ್ರಾಮ ಪಂಚಾಯತಿನ ಅಭಿವೃದ್ದಿಗಾಗಿ ತನಗೆ ಸಹಕರಿಸಿದ ಎಲ್ಲರಿಗೂ ಸ್ಮರಿಸಿಕೊಂಡವರು.
ಗ್ರಾಮದ ಸುಸ್ಥಿರ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಆಯೋಜಿಸಿದ್ದೇವೆ. ಸ್ವಚ್ಛತೆ ಕಾರ್ಯಕ್ರಮ, ಘನತ್ಯಾಜ್ಯ ಘಟಕ, ಡಿಜಿಟಲ್ ಗ್ರಂಥಾಲಯ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಬದಿ ಸ್ವಚ್ಛತೆ, ಸಾಂಕ್ರಮಿಕ ರೋಗ ಮುಕ್ತ ಗ್ರಾಮ, ಅಂಚೆ ಕಚೇರಿ ಪ್ರಾರಂಭ ಮೊದಲಾದ ಅನೇಕ ಅಭಿವೃದ್ದಿ ಕಾರ್ಯಗಳು ನನ್ನ ಅವಧಿಯಲ್ಲಿ ಆಗಿದ್ದು ಖುಷಿ ನೀಡಿದೆ ಎಂದರು. ಶಾಸಕರ ಮೂಲಕ ತುಂಬೆಯಲ್ಲಿ ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ೨.೫ ಕೋಟಿ ರೂಪಾಯಿಯ ಅಭಿವೃದ್ಧಿ ಕಾರ್ಯ ಆಗಿದೆ ಎಂದು ತಿಳಿಸಿದರು.
ತುಂಬೆ ಗ್ರಾ.ಪಂ.ನ ನೂತನ ಅಧ್ಯಕ್ಷೆ ಜಯಂತಿ ಕೇಶವ ಅಧ್ಯಕ್ಷತೆ ವಹಿಸಿದ್ದರು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಗಂಗಾಧರ ಆಳ್ವ, ಪಿಡಿಓ ಚಂದ್ರಾವತಿ
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಾಗರಿಕ ಅಭಿನಂದನಾ ಸಮಿತಿ ತುಂಬೆ ಇದರ ಸಂಯೋಜಕ ಸದಾಶಿವ ಡಿ. ತುಂಬೆ ಅವರು ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಉದಯಕುಮಾರ್ ಜ್ಯೊತಿಗುಡ್ಡೆ ಸನ್ಮಾನ ಪತ್ರ ವಾಚಿಸಿದರು, ಉಪಾಧ್ಯಕ್ಷ ಗಣೇಶ್ ಸಾಲ್ಯಾನ್, ನಿವೃತ್ತ ಮುಖ್ಯ ಶಿಕ್ಷಕ ಬಿ. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸದಾಶಿವ ಡಿ. ತುಂಬೆ ಮತ್ತು ಬಳಗದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು.
—