
ಬಂಟ್ವಾಳ: ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಿ.ಮಂಚಿ ಕುಕ್ಕಾಜೆ ಇದರ 2025-26ನೇ ಸಾಲಿನ ವಾರ್ಷಿಕ ಮಹಾ ಸಭೆ ಮಂಚಿ ಕುಕ್ಕಾಜೆಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕೇಶವ ರಾವ್ ಎನ್. ಅಧ್ಯಕ್ಷತೆಯಲ್ಲಿ ನಡೆಯಿತು.


ವಾರ್ಷಿಕ ಮಹಾಸಭೆಯ ಕಾರ್ಯಕಲಾಪಗಳನ್ನು ನಡೆಸಿಕೊಟ್ಟ ಸಂಘದ ಅಧ್ಯಕ್ಷ ಕೇಶವ ರಾವ್ ಎನ್. ಮಾತನಾಡಿ 72 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿರುವ ನಮ್ಮಸಂಘ ವಿಶೇಷವಾದ ಹಿನ್ನಲೆಯನ್ನು ಹೊಂದಿದೆ. ಹಿರಿಯರು, ಅನುಭವಿಗಳ ಮಾರ್ಗದರ್ಶನ, ಸಿಬ್ಬಂದಿಗಳ ಪರಿಶ್ರಮ, ಸದಸ್ಯರ ಸಹಕಾರದಿಂದ ಸಂಘ ಈ ಹಂತಕ್ಕೆ ಬೆಳೆದಿದೆ ಎಂದು ತಿಳಿಸಿದರು. ಎಲ್ಲಾ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ಸರ್ಕಾರ ಘೋಷಿಸಿದ ಯೋಜನೆಗಳನ್ನು ಪಡೆಯಲು ಸಹಕಾರಿ ಸಂಘ ಸುಲಭದ ದಾರಿಯಾಗಿದ್ದು, ಸಂಘ ಇನ್ನಷ್ಟು ಬೆಳೆಯಲು ಸದಸ್ಯರು, ಅಧಿಕಾರಿಗಳ ಕೃಪೆ ಅಗತ್ಯ ಎಂದರು. ಕಾನೂನು ಚೌಕಟಿನೊಳಗೆ ಸಾಧ್ಯತೆ ಇರುವ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಆಡಳಿತ ಮಂಡಳಿ ಮಾಡುತ್ತಿದ್ದು
ರೈತರನ್ನು ಗುರುತಿಸುವ ನಿಟ್ಟಿನಲ್ಲಿ ಸಂಸ್ಥೆ ಬೆಳೆಯುತ್ತಿದೆ. ಸದಸ್ಯರು ಸೂಕ್ತ ದಾಖಲೆಗಳನ್ನು ನೀಡಿ ತಮಗೆ ಅಗತ್ಯವಿರುವ ಸಾಲ ಪಡೆಯುವಂತೆ ಅವರು ತಿಳಿಸಿದರು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ ಪಿ. ಸಭೆಯ ನೋಟಿಸನ್ನು ಓದಿದರು. 2025-26ನೇ ವರ್ಷದ ಆಡಳಿತ ಮಂಡಳಿಯ ವರದಿಯನ್ನು ವಾಚಿಸಿ, ಅಂದಾಜು ಬಜೆಟ್ ಮಂಡಿಸಿದರು. ವರದಿ ವರ್ಷದ ಲೆಕ್ಕಪತ್ರ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಷಯಗಳು ಮಹಾಸಭೆಯಲ್ಲಿ ಚರ್ಚಿತಗೊಂಡವು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಸಂಘವನ್ನು ಮುನ್ನಡೆಸಿದ ಹಿರಿಯರನ್ನು ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ನಿಶ್ಚಲ್ ಜಿ. ಶೆಟ್ಟಿ ಸ್ವಾಗತಿಸಿದರು.
ನಿರ್ದೇಶಕ ಮೋಹನದಾಸ ಶೆಟ್ಟಿ ವಂದಿಸಿದರು.
ನಿರ್ದೇಶಕರಾದ ಸುರೇಶ್ ಕೊಟ್ಟಾರಿ, ಗೋಪಾಲ ಎ., ನಾರಾಯಣ ನಾಯ್ಕ, ಚಂದಪ್ಪ ಕಂಚಿನಡ್ಕ, ಜಗದೀಶ ಎಸ್. ಶೆಟ್ಟಿ, ದೇವಿಪ್ರಸಾದ್ ಸಿ.ಕೆ., ಅಶೋಕ ಸಿ. ಆಶಾ ಪ್ರಭು, ನಳಿನಿ ಬಿ. ರೈ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಯೋಗೀಶ್ ಹೆಚ್. ಉಪಸ್ಥಿತರಿದ್ದರು.
Advertisement







