
ಬಂಟ್ವಾಳ: ಶ್ರೀ ಗುರು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ನಿ. 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅಧ್ಯಕ್ಷತೆಯಲ್ಲಿ ಮೆಲ್ಕಾರ್ ನ ಬಿರ್ವ ಸಭಾಂಗಣದಲ್ಲಿ ನಡೆಯಿತು.

ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ, ಮಹಾಸಭೆಯ ಕಾರ್ಯಕಲಾಪವನ್ನು ನಡೆಸಿ ಮಾತನಾಡಿದ ಅವರು ಸಂಘವು ವರದಿ ಸಾಲಿನಲ್ಲಿ 130.67 ಕೋಟಿ ರೂ. ಠೇವಣಿ ಸಂಗ್ರಹಿಸಿದೆ.52.73 ಕೋಟಿ ಸಾಲ ಹಂಚಿಕೆ ಮಾಡಿ, 47.09 ಕೋಟಿ ರೂ. ಸಾಲ ವಸೂಲಾತಿ ಮಾಡಿದೆ. 27.62 ಕೋಟಿ ರೂ. ಹೊರಬಾಕಿ ಇದೆ. 5.75 ಕೋಟಿ ರೂ. ಹೂಡಿಕೆ ಮಾಡಿದೆ. 32 ಸ್ವಸಹಾಯ ಗುಂಪುಗಳಿದ್ದು 296 ಸದಸ್ಯರು ಅದರಲ್ಲಿ ತೊಡಗಿಸಿಕೊಂಡಿದ್ದಾರೆ. 35.64 ಲಕ್ಷ ಸಾಲ ಹೊರ ಬಾಕಿ ಇದೆ. 2025-26 ರಲ್ಲಿ ಸಂಘ ಒಟ್ಟು 246.49 ಕೋಟಿ ರೂ.ವಹಿವಾಟು ನಡೆಸಿ 42.75 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 15 ಡಿವಿಡೆಂಟ್ ನೀಡುವುದಾಗಿ ಘೋಷಿಸಿದರು.


ಎಲ್ಲರನ್ನೂ ಒಟ್ಟುಗೂಡಿಸಿ ಕೊಂಡು ಸಂಘ ಕಟ್ಟಬೇಕು ಎನ್ನುವುದು ನಮ್ಮಕನಸು. ಈ ಸಂಸ್ಥೆಯ ಸ್ಪೂರ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳು. ನಮ್ಮ ಬದುಕಿನಲ್ಲಿ ನಾವು ಏನಾಗಬೇಕು ಎನ್ನುವುದನ್ನು ನಾವೇ ತೀರ್ಮಾನ ಮಾಡಬೇಕು. ಸೃಜನಶೀಲತೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಮಕ್ಕಳು ಮೊದಲು ಮನುಷ್ಯರಾಗಬೇಕು, ಅವರಿಗೆ ಧರ್ಮದ ಪರಿಚಯವಾಗಬೇಕು. ಅದನ್ನು ಪೋಷಕರು ಕಲಿಸಿ ಕೊಡಬೇಕು. ನಮ್ಮ ಸಂಸ್ಕಾರ, ಸಂಸ್ಕತಿ, ಪರಂಪರೆ ಮಾತ್ರ ನಮ್ಮನ್ನು ಕಾಪಾಡುತ್ತದೆ ಎಂದು ತಿಳಿಸಿದರು.

ಸಾಧಕ ವಿದ್ಯಾರ್ಥಿಗಳಾದ ಹಿತೇಶ್ ಹಾಗೂ ಧನ್ಯಶ್ರೀಯವರನ್ನು ಗೌರವಿಸಲಾಯಿತು. ಸಾಧನೆ ಮಾಡಿದ ಸಂಘದ ಶಾಖೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸದಸ್ಯರ ಮಕ್ಕಳಿಗೆ ಸಹಾಯಧನ ವಿತರಿಸಲಾಯಿತು. ಸಂಘದ ಪಿಗ್ಮಿ ಸಂಗ್ರಹಕರನ್ನು ಗೌರವಿಸಲಾಯಿತು.
ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ
ನಿರ್ದೇಶಕರಾದ ರತ್ನಾಕರ ಪೂಜಾರಿ ಮೆಲ್ಕಾರ್, ಭುವನೇಶ್ ಪಚ್ಚಿನಡ್ಕ, ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಹರೀಶ್ ಎಚ್., ತುಳಸಿ ಇರಾ, ಲಕ್ಷ್ಮೀ ಪೆರ್ವ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚರಣ್ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿರ್ದೇಶಕರಾದ ರತ್ನಾಕರ ಪೂಜಾರಿ ನಾಡಾರು ಸ್ವಾಗತಿಸಿದರು. ಉಪಾಧ್ಯಕ್ಷ ರಮೇಶ್ ಅನ್ನಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕರಾದ ಶೈಲೇಶ್ ಪೂಜಾರಿ ವಂದಿಸಿದರು, ಸಿಇಓ ಚರಣ್ ಕಾರ್ಯಕ್ರಮ ನಿರೂಪಿಸಿದರು.
Advertisement







