
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಎಂ. ಕರುಣೇಂದ್ರ ಪೂಜಾರಿ ಕೊಂಬರ ಬೈಲು ಅವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷ ಆದಿರಾಜ್ ಕೆ. ಜೈನ್ ಸ್ವಾಗತಿಸಿದರು. ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ಹಂತ ಹಂತವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು ಇನ್ನಷ್ಟು ಹೊಸ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಸದಸ್ಯರ ಸಹಕಾರ ಅಗತ್ಯ. ಮುಂದಿನ ವರ್ಷದಿಂದ ಸದಸ್ಯರಿಗೆ ಹೆಚ್ಚು ಡಿವಿಡೆಂಟ್ ನೀಡಲು ಹಾಗೂ ಸಂಘದ ನಿವ್ವಳ ಲಾಭಾಂಶವನ್ನು ಹೆಚ್ಚಿಸಲು ಕಾರ್ಯಯೋಜನೆ ರೂಪಿಸುವುದಾಗಿ ತಿಳಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ 2025-26ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪತ್ರ, ಆಯ್ಯವ್ಯಯವನ್ನು ಮಂಡಿಸಿದರು.
ಸಂಘದ ಅಧ್ಯಕ್ಷರಾದ ಎಂ. ಕರುಣೇಂದ್ರ ಪೂಜಾರಿ ಮಹಾಸಭೆಯ ಕಲಾಪವನ್ನು ನಡೆಸಿಕೊಟ್ಟರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಸಲಹೆ ಸೂಚನೆಗಳನ್ನು ಆಲಿಸಿದರು. ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಅಧ್ಯಕ್ಷರ ಅನುಮತಿಯ ಮೇರೆಗೆ ಇತರ ವಿಚಾರಗಳು ಚರ್ಚಿತವಾದವು. ಕಾರ್ಯಕ್ರಮ ದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು
ನಿರ್ದೇಶಕರಾದ ಬಿ.ಜಯ, ವಿಠಲ ಪೂಜಾರಿ, ಮುರಳೀಧರ ಭಟ್, ಚಂದ್ರಶೇಖರ ಭಂಡಾರಿ, ದಿವಾಕರ ಶೆಟ್ಟಿ, ಜಯಂತಿ, ಎ.ಲಕ್ಷ್ಮೀ ವಿ.ಪ್ರಭು, ಪದ್ಮನಾಭ ಗೌಡ, ಗಣೇಶ್, ಹರೀಶ್, ಉಪಸ್ಥಿತರಿದ್ದರು. ನಿರ್ದೇಶಕ ಬಿ. ಸದಾಶಿವ ಶೆಣೈ ವಂದಿಸಿದರು. ಸಂಘದ ಸದಸ್ಯರು ಸಹಕರಿಸಿದರು.
Advertisement







