
ಬಂಟ್ವಾಳ: ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ನ ವಾರ್ಷಿಕ ಮಹಾಸಭೆಯಲ್ಲಿ ದ.ಕ. ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ. ಸಂಸ್ಥೆಗೆ, ತನ್ನ ವ್ಯವಹಾರಿಕ ಹಾಗೂ ಸರ್ವತೋಮುಖ ಸಾಧನೆಗಾಗಿ, ವಿವಿಧೋದ್ದೇಶ ಸಹಕಾರಿ ಸಂಘಗಳ ವಿಭಾಗದಲ್ಲಿ ಸಾಧನಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಂಸ್ಥೆಯ ನಿರ್ದೇಶಕರಾದ ಗಜೇಂದ್ರ ಪ್ರಭು ಹಾಗೂ ವಿಜಯ ಕುಮಾರಿ ಇಂದ್ರ ಉಪಸ್ಥಿತರಿದ್ದರು.
Advertisement







