
ಬಂಟ್ವಾಳ: ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಎಲ್ ಸಿಐ ಎಫ್ ನಿಧಿಯಿಂದ ಅಕ್ಷಯ ಪಾತ್ರೆ ಫೌಂಡೇಷನ್ ಗೆ 25 ಲಕ್ಷ ರೂ.ವೆಚ್ಚದ ಶಾಲೆಗಳಿಗೆ ಆಹಾರ ಸಾಗಟ ಮಾಡುವ ವಾಹನವನ್ನು ಕೊಡುಗೆಯಾಗಿ ನೀಡಲಾಯಿತು.
ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿರುವ ಅಕ್ಷಯ ಪಾತ್ರೆ ಸಂಸ್ಥೆಯ ಆವರಣದಲ್ಲಿ ಬುಧವಾರ ಸಂಜೆ ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಮಂಗಳೂರು ಅಕ್ಷಯ ಪಾತ್ರೆಯ ಉಪಾಧ್ಯಕ್ಷ ಸನಂಧನ ಪ್ರಭು ಅವರಿಗೆ ವಾಹನದ ಕೀ ಹಸ್ತಾಂತರಿಸಿದರು.
ಈ ಸಂದರ್ಭ ಬೆಂಜನಪದವಿನ ಅಕ್ಷಯಪಾತ್ರೆ ಅಡುಗೆ ಕೋಣೆಯ ಕಾರ್ಯನಿರ್ವಹಣೆಯ ಬಗ್ಗೆ ಸನಂಧನ ಪ್ರಭು ಅವರು ಲಯನ್ಸ್ ಜಿಲ್ಲಾ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಬಳಿಕ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನಂದನ ಪ್ರಭು ಮಾತನಾಡಿ ಪ್ರತಿನಿತ್ಯ 21 ಸಾವಿರ ಮಕ್ಕಳಿಗೆ ಆರೋಗ್ಯಪೂರ್ಣ ಹಾಗೂ ಶುಚಿಯಾದ ಆಹಾರ ಪೂರೈಕೆಯಾಗುತ್ತಿದೆ. ಲಯನ್ಸ್ ಸಂಸ್ಥೆಯ ಇಂತಹ ಸೇವಾ ಕಾರ್ಯಗಳು ಅನೇಕ ಮಂದಿಗೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು. ಅರವಿಂದ ಶೆಣೈ ಅವರು ಮುಂದಾಳತ್ವ ವಹಿಸಿ ಸಹಕಾರ ನೀಡಿರುವುದು ಅಭಿನಂದನೀಯ. ಸಹಕರಿಸಿದ ಲಯನ್ಸ್ ನ ಎಲ್ಲಾ ಬಂಧುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಮಾತನಾಡಿ ಇಸ್ಕಾನ್ ನ ಅಕ್ಷಯಪಾತ್ರೆ ಯೋಜನೆಗೆ ಕೈ ಜೋಡಿಸಲು ಅವಕಾಶ ಸಿಕ್ಕಿರುವುದು ದೇವರ ಅನುಗ್ರಹ.
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಫೌಂಡೇಷನ್ ಮೂಲಕ ಈ ಕೊಡುಗೆ ನೀಡಲು ಸಾಧ್ಯವಾಗಿದೆ ಎಂದರು.
ಆಹಾರದ ವಾಹನ ನೀಡಲು ಸಹಕರಿಸಿದವರಿಗೆ ಗವರ್ನರ್ ಗೌರವಿಸಿದರು.

ಜಿಲ್ಲಾ ಪ್ರಥಮ ರಾಜ್ಯಪಾಲ ಗೋವರ್ಧನಶೆಟ್ಟಿ, ದ್ವಿತೀಯ ರಾಜ್ಯಪಾಲ ವೆಂಕಟೇಶ ಹೆಬ್ಬಾರ್ ಶುಭ ಹಾರೈಸಿದರು.
ವೇದಿಕೆಯಲ್ಲಿ ನಕುಲ ಕೃಷ್ಣದಾಸ್ ಪ್ರಭು, ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪಿಆರ್ ಒ ಸುದರ್ಶನ್ ಪಡಿಯಾರ್, ಜಿಲ್ಲಾ ಸಂಪುಟ ಸಂಯೋಜಕಿ ನ್ಯಾನ್ಸಿ ಮಸ್ಕರೇನಸ್, ಗವರ್ನರ್ ಅವರ್ ಕೋ ಅರ್ಡಿನೇಟರ್ ಜ್ಯೋತಿ ಶೆಟ್ಟಿ , ಅಕ್ಷಯಪಾತ್ರೆ ಮ್ಯಾನೇಜರ್ ನವೀನ್ ಉಪಸ್ಥಿತರಿದ್ದರು.
ಲಯನ್ಸ್ ಎಲ್ ಸಿ ಐ ಎಫ್ ಚೀಪ್ ಕಾರ್ಡಿನೇಟರ್ ಲೋಕೇಶ್ ಶೆಟ್ಟಿ ಸ್ವಾಗತಿಸಿದರು.ಸಂಪುಟ ಕಾರ್ಯದರ್ಶಿ ಚಂದ್ರೇಗೌಡ ವಂದಿಸಿದರು. ಜಿಎಸ್ ಟಿ ಚೀಪ್ ಕಾರ್ಡಿನೇಟರ್ ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.


Advertisement







