
ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ಶ್ರೀರಾಮನಗರದ ಕೇಶವ ಹಾಗೂ ವಿಮಲ ದಂಪತಿಗಳ ಪುತ್ರಿ ಕು| ದಿಶಾ ಅವರು ನಿಟ್ಟೆ ವಿಶ್ವವಿದ್ಯಾಲಯದ (NITTE Deemed to be University) ಅಧೀನದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ, ದೇರಳಕಟ್ಟೆ, ಮಂಗಳೂರು ಇಲ್ಲಿ ಬಿ.ಎಸ್ಸಿ. ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ (B.Sc. Medical Laboratory Technology) ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ ಗಳಿಸುವುದರೊಂದಿಗೆ ಚಿನ್ನದ ಪದಕ (Gold Medal) ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಈ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ನಿಟ್ಟೆ ವಿಶ್ವವಿದ್ಯಾಲಯವು ಅವರಿಗೆ ಪ್ರತಿಭಾ
ಪ್ರಮಾಣಪತ್ರ (Certificate of Merit) ನೀಡಿ ಗೌರವಿಸಿದೆ.
ದಿಶಾ ಅವರ ಈ ಸಾಧನೆಗೆ ಕುಟುಂಬಸ್ಥರು, ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.


Advertisement







