
ಬಂಟ್ವಾಳ: ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಪುತ್ತೂರು ಮತ್ತು ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿ ಬಿ.ಸಿ. ರೋಡ್, ಶಾಖೆಯು ಅರ್ಪಿಸುವ ನವರಾತ್ರಿಯ ಭಕ್ತಿಯಿಂದ ದೀಪಾವಳಿಯ ಬೆಳಕಿನೆಡೆಗೆ.. ಮಾತೆ ಜಗನ್ಮಾತೆಗೆ ನೃತ್ಯ ನಮನ ನೃತ್ಯ ನವಾಹದ 5ನೇ ದಿನದ ಕಾರ್ಯಕ್ರಮ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ಡಾ. ಎನ್. ನರಸಿಂಹ ಹೊಳ್ಳ ಕಲಾ ವೇದಿಕೆಯಲ್ಲಿ ನಡೆಯಿತು.
ಕಲಾದೀಪ ಪುತ್ತೂರಿನ ವಿದ್ವಾನ್ ಬಿ. ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದಂಪತಿ ನೃತ್ಯ ಪ್ರದರ್ಶನ ನೀಡಿದರು.


ಸಂಚಯಗಿರಿಯ ಶ್ಯಾಂಪ್ರಸಾದ್ ದಂಪತಿ ಕಾರ್ಯಕ್ರಮವನ್ನು ಪ್ರಾಯೋಜಿದ್ದು ಸಂಗೀತ ವಿದ್ವಾಂಸ
ಯತಿರಾಜ ಆಚಾರ್ಯ ಬಿ.ಸಿ. ರೋಡು, ಸಂಚಯಗಿರಿ ನಾಗರಿಕ ಕ್ರಿಯಾಸಮಿತಿ ಅಧ್ಯಕ್ಷ ಸುರೇಶ್ ಬಂಗೇರ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಶುಭ ಹಾರೈಸಿದರು.


ಮಾತೇ ನೃತ್ಯ ನವಾಹ’ ಜಗನ್ಮಾತೆಗೆ ನೃತ್ಯನಮನ ಸರಣಿ ಕಾರ್ಯಕ್ರಮವು ಒಂಬತ್ತು ವಿಭಿನ್ನ ವೇದಿಕೆಗಳಲ್ಲಿ ನಡೆಯುತ್ತಿದೆ.
ಮಾತೇ-ಜಗನ್ಮಾತೆಗೆ ನೃತ್ಯನಮನ’ ಸರಣಿಯ ಮೊದಲ ಪ್ರಸ್ತುತಿ ಮಂಗಳೂರಿನ ಕಲಾಸೂರ್ಯ ನೃತ್ಯಾಲಯದಲ್ಲಿ ನಡೆದಿದ್ದು, ಎರಡನೇ ಪ್ರಸ್ತುತಿ ಅ.14ರಂದು ಕಲ್ಲಡ್ಕ ಸಮೀಪದ ದಾಸಕೋಡಿಯ ಕಲಾಶ್ರಯದಲ್ಲಿ, 3ನೇ ಪ್ರಸ್ತುತಿ ಅ.24ರಂದು ಬಜಪೆಯ ತಲಕಳ ಕಾಶಿ ಶ್ರೀ ವಿಶ್ವನಾಥೇಶ್ವರ ಕ್ಷೇತ್ರದಲ್ಲಿ, 4ನೇ ಪ್ರಸ್ತುತಿ ಅ. 25ರಂದು ಪುತ್ತೂರು ಸಾಮೆತ್ತಡ್ಕದ ಕಲಾಕೇಂದ್ರ ಉದಯಗಾನ ಭಜನಾ ಮಂದಿರದಲ್ಲಿ ನಡೆಯಿತು.

ಇದೀಗ 5ನೇ ಪ್ರಸ್ತುತಿ ಬಿ.ಸಿ.ರೋಡಿನಲ್ಲಿ ನಡೆದಿದೆ.
ಶ್ರೀ ಮೂಕಾಂಬಿಕಾ ಕಲ್ಬರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ. ದೀಪಕ್ ಕುಮಾರ್ ಅವರು ದೂರದರ್ಶನದ “ಎ ಟಾಪ್’ ಕಲಾವಿದರಾಗಿದ್ದು, ದಕ್ಷಿಣ ಕನ್ನಡದ ಉಭಯ ಜಿಲ್ಲೆಗಳ ಪ್ರಥಮ ಕಲಾವಿದರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
Advertisement







