
ಬಂಟ್ವಾಳ: ಲಯನ್ಸ್ ಕ್ಲಬ್ ಬಂಟ್ವಾಳ ಹಾಗೂ ಲಿಯೋ ಕ್ಲಬ್ ಬಂಟ್ವಾಳ ಗೋಲ್ಡ್ ಇದರ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ “ಕಲ್ಪತರು” ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಲಯನ್ಸ್ ಜಿಲ್ಲಾ ಪ್ರಥಮ ಉಪ ರಾಜ್ಯಪಾಲ ಗೋವರ್ಧನ ಕೆ.ಶೆಟ್ಟಿ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಮಾತನಾಡಿ ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ಪ್ರಥಮ ಭಾರಿಗೆ ಸ್ತ್ರೀ ಶಕ್ತಿ ಅಧಿಕಾರದ ಗದ್ದುಗೆಯನ್ನು ಹಿಡಿದಿದೆ, ಎಲ್ಲರ ಸಹಕಾರ ಮಾರ್ಗದರ್ಶನದಿಂದ ಈ ತಂಡ ಜಿಲ್ಲೆಯಲ್ಲಿ ಉತ್ತಮ ಸ್ಥಾನವನ್ನು ಗಳಿಸಲಿದೆ ಎಂದರು. ಬಳಿಕ ಪದಾಧಿಕಾರಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಸ್ತಾಂತರಿಸಿದರು.

ನೂತನ ಅಧ್ಯಕ್ಷರಾಗಿ ಚಿತ್ರ ಜೆ.ಎಡಪಡಿತ್ತಾಯ, ಕಾರ್ಯದರ್ಶಿಯಾಗಿ ಜಯಂತಿ ಮುಕುಂದ ಪ್ರಭು, ಕೋಶಾಧಿಕಾರಿಯಾಗಿ ಸುಮ ಸುನೀಲ್ ಹಾಗೂ ಇತರ ಪದಾಧಿಕಾರಿಗಳು, ಲಿಯೋ ಕ್ಲಬ್ ಬಂಟ್ವಾಳ ಗೋಲ್ಡ್ ನ ಅಧ್ಯಕ್ಷೆಯಾಗಿ ಶಿಯಾಂಕ ಆಚಾರ್ಯ, ಕಾರ್ಯದರ್ಶಿಯಾಗಿ ಸ್ಪಟಿಕಾ ಎಸ್. ಆಚಾರ್ಯ, ಕೋಶಾಧಿಕಾರಿಯಾಗಿ ಧ್ರುವಿ ಆರ್. ಕಾರಂತ್ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ನೂತನ ಸದಸ್ಯರನ್ನು ಬಂಟ್ವಾಳ ಕ್ಲಬ್ ಗೆ ಸೇರಿಸಿಕೊಳ್ಳಲಾಯಿತು.
ನೂತನ ಅಧ್ಯಕಚೆ ಚಿತ್ರ ಎಡಪಡಿತ್ತಾಯ ಮಾತನಾಡಿ ಲಯನ್ಸ್ ಕ್ಲಬ್ ಬಂಟ್ವಾಳ ಪ್ರಥಮ ಮಹಿಳಾ ತಂಡವನ್ನು ಪರಿಚಯಿಸಿದೆ. ಇದೊಂದು ಅಮೂಲ್ಯ ಅವಕಾಶವಾಗಿದ್ದು ಕ್ಲಬ್ ಸದಸ್ಯರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ , ಪ್ತೋತ್ಸಾಹ ಹಾಗೂ ಪ್ರೀತಿಯ ಫಲವಾಗಿದೆ. ನನಗೆ ಒಳ್ಳೆಯ ತಂಡ ಸಿಕ್ಕಿದ್ದು ಉತ್ತಮವಾದ ಸೇವಾ ಕಾರ್ಯಕ್ರಮ ಮುಂದುವರೆಸುವುದಾಗಿ ತಿಳಿಸಿದರು.
ಲಿಯೋ ಕ್ಲಬ್ ಬಂಟ್ವಾಳ ಗೋಲ್ಡ್ ನ ಅಧ್ಯಕ್ಷೆ ಅನಿಸಿಕೆ ವ್ಯಕ್ತಪಡಿಸಿದರು.
ಸೇವಾ ಕಾರ್ಯಕ್ರಮದ ಅಂಗವಾಗಿ ನಲ್ಕೆಮಾರ್ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಸಮವಸ್ತ್ರ ವಿತರಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಕಾರ ನೀಡಲಾಯಿತು. ಕ್ಲಬ್ ಸದಸ್ಯ ಸುಧಾಕರ ಆಚಾರ್ಯ ಎಂಜೆಎಫ್ ದೇಣಿಗೆ ಹಸ್ತಾಂತರಿಸಿದರು. ತಾಲೂಕಿನ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕ್ಲಬಿನ ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಗೌರವಿಸಲಾಯಿತು. ನಾಟಿ ವೈದ್ಯ ಈಶ್ವರ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಬಹುಮುಖ ಪ್ರತಿಭೆ ಅನ್ವೇಶ್ ಅಂಬೇಕಲ್ಲು ಸನ್ಮಾನಿಸಲಾಯಿತು.
ಪದಗ್ರಹಣ ಅಧಿಕಾರಿ ಲಯನ್ಸ್ ಪ್ರಥಮ ರಾಜ್ಯಪಾಲ ಗೋವರ್ಧನ ಶೆಟ್ಟಿಯವರನ್ನು ಗೌರವಿಸಲಾಯಿತು.

ನಿರ್ಗಮನ ಕಾರ್ಯದರ್ಶಿ ಡಾ. ದಿವ್ಯ ವಸಂತ್ ಕುಮಾರ್ ಶೆಟ್ಟಿ ಹಾಗೂ ಕೋಶಾಧಿಕಾರಿ ರಾಮಕೃಷ್ಣ ರಾವ್ ಅವರನ್ನು ಹಾಗೂ ನಿರ್ಗಮನ ಅಧ್ಯಕ್ಷ ರೋಹಿತಾಶ್ವ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೂರ್ವ ಮಲ್ಟಿ ಕೌನ್ಸಿಲ್ ಚೇಯರ್ ಮನ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ ಈ ಸಾಲಿನ ಮಹಿಳಾ ತಂಡ ಉತ್ತಮ ಸೇವಾ ಕಾರ್ಯಗಳ ಮೂಲಕ ಜಿಲ್ಲೆಯಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಲಿ ಎಂದು ಶುಭ ಹಾರೈಸಿದರು. ಸರಿಯಾದ ಸೇವೆ ನೀಡಿದಾಗ ಅದು ಜನರನ್ನು ತಲುಪುತ್ತದೆ. 50 ವರ್ಷಗಳ ಹಿಂದೆ ಆರಂಭವಾದ ನಮ್ಮ ಕ್ಲಬ್ ನ ಬೇರು ಭದ್ರವಾಗಿದೆ ಎಂದರು.ಪ್ರಾಂತೀಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಶುಭ ಹಾರೈಸಿದರು.
ವಲಯಾಧ್ಯಕ್ಷ ಉಮೇಶ್ ಆಚಾರ್, ಕಾರ್ಯದರ್ಧಿವಡಾ. ದಿವ್ಯ ವಸಂತ ಕುಮಾರ್ ಶೆಟ್ಟಿ, ಕೋಶಾಧಿಕಾರಿ ರಾಮಕೃಷ್ಣ ರಾವ್, ಲಿಯೋ ಅಧ್ಯಕ್ಷೆ ಸ್ಪಟಿಕಾ ಸುನೀಲ್, ಕಾರ್ಯದರ್ಶಿ
ಸ್ಪಂದನಾ ಶ್ರೀನಿವಾಸ್, ಕೋಶಾಧಿಕಾರಿ ಅನ್ವೇಶ್ ಅಂಬೆಕಲ್ಲು ವೇದಿಕೆಯಲ್ಲಿ ಇದ್ದರು.
ಸದಸ್ಯ ಡಾ. ಧೀರಜ್ ಹೆಬ್ರಿ ಕಾರ್ಯಕ್ರಮ ನಿರೂಪಿಸಿದರು.


Advertisement







