
ಬಂಟ್ವಾಳ ನರಿಕೊಂಬು ಗ್ರಾಮ ಪಂಚಾಯತಿನ ಸಂಜೀವಿನಿ ಸಭಾಂಗಣದಲ್ಲಿ ಅರುಂಧತಿ ಸಂಜೀವಿನಿ ಒಕ್ಕೂಟದ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ವಿದ್ಯಾ ಪುಷ್ಪರಾಜ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ವಲಯ ಮೇಲ್ವಿಚಾರಕಿ ದೀಕ್ಷಿತಾ ಎನ್ಆರ್ಎಲ್ಎಂ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಸಿಎಚ್ಒ ಜ್ಯೋತಿ ಮಾದಕ ವ್ಯಸನದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಸಮುದಾಯ ಬಂಡವಾಳ ನಿಧಿ ಪಡೆದ ಸ್ತ್ರೀ ಶಕ್ತಿ ಸಂಘಗಳನ್ನು ಗುರುತಿಸಲಾಯಿತು. ಸಂಘದ ಸದಸ್ಯರಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ರಶ್ಮಿ ಸ್ವಾಗತಿಸಿದರು. ವಿಜಯ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಾಯತ್ರಿ ವರದಿ ವಾಚಿಸಿದರು. 2026-27 ನೇ ಸಾಲಿನ ಕ್ರಿಯಾಯೋಜನೆ ಮತ್ತು ಜಮಾ ಖರ್ಚಿನ ವಿವರವನ್ನು ಎಂಬಿಕೆ ರೂಪಾ ಮಂಡಿಸಿದರು. ವೀಣಾ ವಂದಿಸಿದರು


Advertisement







