
ಬಂಟ್ವಾಳ: ಇಲ್ಲಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಭಾನುವಾರ ನಡೆದಿದ್ದು ೪ನೇ ತರಗತಿಯ ವಿದ್ಯಾರ್ಥಿನಿ ಹಿಮಾನಿ ಪ್ರಸ್ತುತ ಪಡಿಸಿದ ಕೂಪಿಕಾ ಸಮಾತೋಲನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಸೋಡಾ ಬಾಟಲಿಗಳ ಮೇಲೆ ಮೂರು ಅಂತಸ್ತಿನಲ್ಲಿ ಮರದ ಕುರ್ಚಿಯನ್ನಿಟ್ಟು ಅದರ ಮೇಲೆ ಬಾಲಕಿ ಯೋಗಾಸನಗೈಯ್ಯುವ ಸಾಹಸ ಪ್ರದರ್ಶನ ವಿಶೇಷ ಗಮನ ಸೆಳೆಯಿತು.

ವಿದ್ಯಾರ್ಥಿಗಳು ಮೈ ನವಿರೇಳಿಸುವ ಬೆಂಕಿ ಸಾಹಸ ಸಹಿತ ವಿವಿಧ ಶಾರೀರಿಕ ಪ್ರದರ್ಶನಗಳನ್ನು ಈ ಸಂದರ್ಭ ನಡೆಸಿಕೊಟ್ಟರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದಾಮೋದರ ನೆತ್ತರಕೆರೆ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಲ್ವಿಯಾ ಬ್ರೇಗ್ಸ್, ಎಸ್ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕ ವೃಂದದವರು ಈ ಸಂದರ್ಭ ಉಪಸ್ಥಿತರಿದ್ದರು.


Advertisement







