
ಬಂಟ್ವಾಳ: ತುಳುನಾಡಿನ ಶೈಲಿಯ ತಿಂಡಿ ತಿನಿಸುಗಳಿಗೆ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬಂಟ್ವಾಳ ತಾಲೂಕಿನ ಕೈಕಂಬದ ಪೊಳಲಿ ದ್ವಾರದ ಬಳಿಯಿರುವ ರಾಜಶ್ರೀ ಗ್ರಾಂಡ್ಯೂರ್ ನಲ್ಲಿರುವ ಸಾಯಿಲೀಲಾ ಶುದ್ದ ಸಸ್ಯಹಾರಿ ಹೋಟೇಲ್ ನಲ್ಲಿ ಶ್ರೀ ಲಕ್ಷ್ಮೀ ಪೂಜೆ ವಿಜೃಂಭಣೆಯಿಂದ ನಡೆಯಿತು.


ಸಂಜೆ ಅರ್ಚಕ ವೃಂದದ ಪೌರೋಹಿತ್ಯದಲ್ಲಿ ಶ್ರೀ ಲಕ್ಷ್ಮೀ ಪೂಜೆ ನೆರೆವೇರಿದ್ದು ಹೊಟೇಲ್ ಮಾಲಕ ಸದಾನಂದ ಬಂಗೇರ, ಅವರ ಕುಟುಂಬ ವರ್ಗ, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಬಳಿಕ ಖ್ಯಾತ ಗಾಯಕ ಕೆ.ಜೆ. ಏಸುದಾಸ್ ಅವರ ಶಿಷ್ಯ ವೆಂಕಟಕೃಷ್ಣ ಬಳಗದಿಂದ ನಡೆದ ಭಾವ ಭಕ್ತಿಗಾನ ವೈಭವ ನೆರೆದ ಪ್ರೇಕ್ಷಕರ ಮನ ಸೂರೆಗೊಳಿಸಿತು.
ಸದಾನಂದ ಬಂಗೇರ ಅವರ ಮಾಲಕತ್ವದ ಹೊಟೇಲ್ ಸಾಯಿಲೀಲಾ ತುಳು ಚಿತ್ರನಟ ಭೋಜರಾಜ್ ವಾಮಂಜೂರು ಅವರಿಂದ ಉದ್ಘಾಟನೆಗೊಂಡು ಯಶಸ್ವಿ ಎಂಟು ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಳುನಾಡು ಶೈಲಿಯ ಮನೆ ತಿಂಡಿಗಳು ಇಲ್ಲಿನ ವಿಶೇಷತೆಯಾಗಿದ್ದು ಊರ ಪರವೂರ ಗ್ರಾಹಕರು ವಿಶೇಷ ತಿಂಡಿ, ತಿನಿಸು ಖಾದ್ಯಗಳನ್ನು ಸವಿಯಲು ಇಲ್ಲಿಗೆ ಆಗಮಿಸುತ್ತಾರೆ.


ತುಳುನಾಡಿನ ವಿಶೇಷ ತಿಂಡಿಗಳಾದ ಪತ್ರೋಡೆ, ಬಸಳೆ ಪುಂಡಿ, ಎಣ್ಣೆ ರಹಿತ ಓಡುರೊಟ್ಟಿ, ರಾಗಿ ಮಣ್ಣಿ, ಬಾಳೆ ಎಲೆ ಗಟ್ಟಿ, ಗೋಳಿ ಎಲೆ ಗಟ್ಟಿ, ಕಡ್ಲೆ ಅವಲಕ್ಕಿ, ಹೆಸರು ಅವಲಕ್ಕಿ, ಸೇಮಿಗೆ ತೋವೆ, ನೀರ್ ದೋಸೆ, ರಾಗಿ ದೋಸೆ, ಬೆಣ್ಣೆ ದೋಸೆ, ಅಕ್ಕಿಪೂರಿ ಮತ್ತಿತರ ತಿಂಡಿಗಳು ಇಲ್ಲಿ ಲಭ್ಯವಿರುತ್ತದೆ. ಶುಚಿ ರುಚಿಯಾದ ಮಧ್ಯಾಹ್ನದ ಊಟ, ವಿವಿಧ ಬಗೆಯ ಚಟ್ಟಿ, ನಾನಾ ತರದ ದೋಸೆ ಐಟಂಗಳು, ಹಣ್ಣಿನ ಜ್ಯೂಸ್, ಐಸ್ ಕ್ರೀಂಗಳನ್ನು ಕುಟುಂಬ ಸಮೇತರಾಗಿ ಸವಿಯುವ ಅವಕಾಶ ಇಲ್ಲಿದೆ. ಸ್ವಚ್ಚತೆಗೆ ವಿಶೇಷ ಆದ್ಯತೆ ನೀಡುವ ಮೂಲಕ ಸಾಯಿಲೀಲಾ ಹೊಟೇಲ್ ಮನೆಮಾತಾಗಿದೆ. ಚಲನ ಚಿತ್ರ ನಟ, ನಟಿಯರು, ರಾಜಕಿಯ ಗಣ್ಯರು ಕಿರುತೆರೆ ಕಲಾವಿದರು, ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಜನಪ್ರಿಯ ವ್ಯಕ್ತಿಗಳು ಭೇಟಿ ನೀಡಿ ಇಲ್ಲಿನ ತಿಂಡಿ ತಿನಿಸುಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಗ್ರಾಹಕ ಸ್ನೇಹಿ ಸೇವೆಗೆ ಫಿದಾ ಆಗಿದ್ದಾರೆ.
Advertisement







