
ಬಂಟ್ವಾಳ: ರೋಟರಿ ಮೀನ್ಸ್ ಬ್ಯುಸಿನೆಸ್ ಫೆಲೋಶಿಪ್ ಮಂಗಳೂರು ಇದರ ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ರೋಟರಿ ಗೋಲ್ಡನ್ ಜುಬಿಲಿ ಸಭಾಂಗಣದಲ್ಲಿ ನಡೆಯಿತು.
ಭಾರತ್ ಬೀಡಿ ವರ್ಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಜಿ.ಪೈ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ರೋಟರಿ ಬಂಟ್ಚಾಳ ಟೌನ್ ನ ಮಾಜಿ ಅಧ್ಯಕ್ಷ ಜಯರಾಜ್ ಎಸ್. ಬಂಗೇರ, ಅಧ್ಯಕ್ಷರಾಗಿ, ನೆಲ್ಸನ್ ಕ್ಯಾಸ್ಟಲಿನೋ ಕಾರ್ಯದರ್ಶಿಯಾಗಿ, ಪ್ರಸನ್ನ ರಾವ್ ಕೋಶಾಧಿಕಾರಿಯಾಗಿ ಶ್ಯಾಮ್ ಲಾಲ್ ಉಪಾಧ್ಯಕ್ಷರಾಗಿ, ಕಿರಣ್ ಕುಮಾರ್, ಬ್ರಿಯಾನ್ ಪಿಂಟೋ, ಕಿಶನ್ ಕುಮಾರ್ ಮತ್ತು ಸಾಯಿಬಾಬ ರಾವ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು.
ನೂತನ ಅಧ್ಯಕ್ಷ ಜಯರಾಜ್ ಎಸ್. ಬಂಗೇರ ಆಶಯ ಭಾಷಣ ಮಾಡಿ ಮೂರು ವರ್ಷಗಳ ಹಿಂದೆ ಆರ್ ಎಂ ಬಿ ಸ್ಥಾಪಿಸಿ ರೋಟರಿ ಸದಸ್ಯರಲ್ಲಿಯೇ ವ್ಯವಹಾರ ಉಳಿಸಿಕೊಂಡಿದೆ ಎಂದರು. ವ್ಯವಹಾರಕ್ಕಿಂತಲೂ ಮಿಗಿಲಾಗಿ ನಾವು ಮಾಡುವ ಕೆಲಸದಲ್ಲಿ ಸಂತೃಪ್ತಿ ಭಾವ ಮುಖ್ಯವಾಗುತ್ತದೆ. ಘಟಕದ ಯಶಸ್ಸಿಗೆ ಎಲ್ಲರ ಬೆಂಬಲ, ಸಲಹೆ ಸಹಕಾರ ನೀಡುವಂತೆ ವಿನಂತಿಸಿದರು.
ಈ ಸಂದರ್ಭ ನೂತನ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸಲಾಯಿತು.
ಮುಖ್ಯ ಅತಿಥಿ ಭಾರತ್ ಬೀಡಿ ವರ್ಕ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ ಜಿ.ಪೈ ಮಾತನಾಡಿ ನಂಬಿಕೆ, ಅರ್ಪಣಾ ಮನೋಭಾವ, ಪರಿಶ್ರಮ, ತರಬೇತಿಯ ಮೂಲಕ ಕೆಲಸ ಮಾಡಿದಾಗ ಸಂಘಟನೆಯಾಗಿ, ವ್ಯವಹಾರವಾಗಲಿ ಯಶಸ್ಬಿಯಾಗಲು ಸಾಧ್ಯ. ಒಬ್ಬರಿಗೊಬ್ಬರು ಸಹಕರಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ಜಿಲ್ಲಾ ಗವರ್ನರ್ ವಿಕಂ ದತ್ತ ಪದಪ್ರದಾನ ನೆರವೇರಿಸಿ ಮಾತನಾಡಿ ನಂಬಿಕೆಯನ್ನು ಇಟ್ಟು ಕೆಲಸ ಮಾಡಿದಾಗ ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ. ಅಂತಹ ನಂಬಿಕೆಯ ವ್ಯವಹಾರ ಆರ್ ಎಂ ಬಿಯಲ್ಲಿ ಆಗುತ್ತಿದೆ ಎಂದರು.
ಕಾರ್ಯದರ್ಶಿ ಸಾಯಿಬಾಬಾರಾವ್ ವರದಿ ಮಂಡಿಸಿದರು.ಯಶೋಮತಿ ಪ್ರವೀಣ್ ಭಂಡಾರಿ, ಕಾರ್ಯಕ್ರಮ ನಿರೂಪಿಸಿದರು.
Advertisement







