
ಬಂಟ್ವಾಳ: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317 ಡಿ ಇದರ ವತಿಯಿಂದ ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್ ಫೌಂಡೇಷನ್ ತುರ್ತು ನಿಧಿಯ ಮೂಲಕ ಅರ್ಹ ಬಡಕುಟುಂಬಗಳಿಗೆ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ಲಯನ್ಸ್ ಜಿಲ್ಲಾ ಗವರ್ನರ್ ತಾರಾನಾಥ ಎಚ್. ಎಂ. ಮಾತನಾಡಿ ಲಯನ್ಸ್ ಇಂಟರ್ನ್ಯಾಷನಲ್ ನಿಂದ ಈ ವರ್ಷ 14.38 ಲಕ್ಷ ರೂಪಾಯಿ ಎಲ್ ಸಿಐಎಫ್ ಎಮರ್ಜೆನ್ಸಿ ಫಂಡ್ ಬಂದಿದ್ದು ಇದರ ಮೂಲಕ ಲಯನ್ಸ್ ಜಿಲ್ಲೆಯ 14 ರಿಜನ್ ನ 1200 ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಾಗುವುದು ಎಂದು ತಿಳಿಸಿದರು.

ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಸಬಿತಾ ತಾರಾನಾಥ್, ಜಿಲ್ಲಾ ಕೋಶಾಧಿಕಾರಿ ಎಂ.ಪಿ. ಸನ್ನಿ, ಪ್ರಾಂತೀಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್, ವಲಯಾಧ್ಯಕ್ಷರಾದ
ಉಮೇಶ್ ಆಚಾರ್ , ಅಜಿತ್ ಇರಾ, ಸಂತೋಷ್ ಡಿಸೋಜಾ ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳದ ಅಧ್ಯಕ್ಷೆ ಚಿತ್ರಾ ಜೆ.ಎಡಪಡಿತ್ತಾಯ ಹಾಗೂ ಎಲ್ಲಾ ಕ್ಲಬ್ ಅಧ್ಯಕ್ಷರು
ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಸ್ವಾಗತಿಸಿದರು, ಪೂರ್ವ ಪ್ರಾಂತೀಯ ಅಧ್ಯಕ್ಷ ದಾಮೋದರ ಬಿ.ಎಂ. ವಂದಿಸಿದರು. ಕಾರ್ಯಕ್ರಮದಲ್ಲಿ ಬಿಪಿಎಲ್ ಕುಟುಂಬದ ಒಟ್ಟು 60 ಫಲಾನುಭವಿಗಳಿಗೆ ಆಹಾರದ ಕಿಟ್ ವಿತರಿಸಲಾಯಿತು.
Advertisement







