
ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿ.ಬಂಟ್ವಾಳ ಇದರ 23ನೇ ವಾರ್ಷಿಕ ಮಹಾಸಭೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆರಂಭದಲ್ಲಿ ಬಂಟ್ವಾಳದ ಪಟ್ಟಣ ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಸಂಘದ ಕಾರ್ಯ ಕ್ಷೇತ್ರವನ್ನು ಬಂಟ್ವಾಳ ತಾಲೂಕಿಗೆ ವಿಸ್ತರಿಸಲಾಯಿತು. ಕಳೆದ 2 ವರ್ಷಗಳ ಹಿಂದೆ ಸಂಘದ ವ್ಯಾಪ್ತಿ ಜಿಲ್ಲಾಮಟ್ಟಕ್ಕೆ ವಿಸ್ತರಣೆಗೊಂಡು ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.



10 ಸಾವಿರಕ್ಕಿಂತಲೂ ಅಧಿಕ ಸದಸ್ಯರು ನೋಂದಾವಣೆ ಮಾಡಿದ್ದು 6 ಸಾವಿರಕ್ಕಿಂತಲೂ ಹೆಚ್ಚು ಸದಸ್ಯರು ಸಕ್ರಿಯವಾಗಿದ್ದಾರೆ. 25 ಸಾವಿರಕ್ಕಿಂತಲೂ ಅಧಿಕ ಗ್ರಾಹಕರು ವ್ಯವಹಾರ ಮಾಡುತ್ತಿದ್ದಾರೆ ಎಂದ ಅವರು ನಿಂತು ಹೋಗಿರುವ ಬಂಟ್ವಾಳ ಸಂತೆಯನ್ನು ಪುನಃ ಕಾರ್ಯರಂಭ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದ
ಜನರಿಗೆ ಹಾಗೂ ವರ್ತಕರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿದ ಸಂಘದ ಸಿಬ್ಬಂದಿಗಳಿಗೆ ಗೌರವಾರ್ಪಣೆ ಮಾಡಲಾಯಿತು. ಮೂರು ಮಂದಿ ಸಾಧಕರನ್ನು ಅಭಿನಂದಿಸಲಾಯಿತು. ಅತಿ ಹೆಚ್ಚು ಲಾಭ ಗಳಿಕೆ, ಹೆಚ್ಚು ಠೇವಣಿ ಸಂಗ್ರಹ ಮಾಡಿದ ಸಂಘದ ಶಾಖೆಗಳಿಗೆ ಪುರಸ್ಕಾರ ನೀಡಲಾಯಿತು. ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಪಿಗ್ಮಿ ಸಂಗ್ರಹಕರನ್ನು ಗೌರವಿಸಲಾಯಿತು.




ಸಂಘದ ನಿರ್ದೇಶಕರಾದ ನಾರಾಯಣ ಸಿ.ಪೆರ್ನೆ ಸ್ವಾಗತಿಸಿದರು, ರವೀಂದ್ರ ಬಿ.ಸಭೆಯ ನೋಟೀಸ್ ಓದಿದರು. ವಿಜಯ ಕುಮಾರಿ ಇಂದ್ರ ವರದಿ ವಾಚಿಸಿದರು.
ಸುಧಾಕರ ಸಾಲ್ಯಾನ್ ನಿವ್ವಳ ಲಾಭ ಹಾಗೂ ಡಿವಿಡೆಂಟ್ ಘೋಷಿಸಿದರು. ಜಯರಾಜ್ ಕಲ್ಲೇರಿ ಬಜೆಟ್ ಮಂಡಿಸಿದರು
ಡಾ. ಸುದೀಪ್ ಕಾರ್ಯಕ್ರಮ ನಿರೂಪಿಸಿದರು. ಲೋಕೇಶ್ ಸುವರ್ಣ ವಂದಿಸಿದರು.


ನಿರ್ದೇಶಕರಾದ ಸ್ವಪ್ನರಾಜ, ರಾಜೇಶ್ ಬಿ., ಜೆ.ಗಜೇಂದ್ರ ಪ್ರಭು, ದಿವಾಕರ ದಾಸ್, ಮೈಕಲ್ ಡಿಕೋಸ್ತ, ಹೇಮಂತ್ ಕುಮಾರ್ ಜೈನ್, ರವೀಂದ್ರ, ಜಯರಾಜ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Advertisement







