
ಬಂಟ್ವಾಳ: ತುಂಬೆಯ ಆಶೀರ್ವಾದ್ ಸೇವಾ ಸಂಘ ಹಾಗೂ ಆಶೀರ್ವಾದ್ ಮಹಿಳಾ ಸೇವಾ ಸಂಘ ಇದರ ಆಶ್ರಯದಲ್ಲಿ 11 ನೇ ವರ್ಷದ ಕೆಸರ್ಡೊಂಜಿ ದಿನ ಕಾರ್ಯಕ್ರಮ ತುಂಬೆ ಬೊಳ್ಳಾರಿಯಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಬೆಳಿಗ್ಗೆ ಸ್ಥಳೀಯ ಹಿರಿಯರಾದ ಬಾಬು ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು
ಗ್ರಾಮ ವಿಕಾಸ ಸಂಯೋಜಕ ದಾಮೋದರ ನೆತ್ತರಕೆರೆ ಮಾತನಾಡಿ ಯಾವುದೇ ಕಾರ್ಯಕ್ರಮಗಳ ಆಯೋಜನೆಯ ಹಿಂದೆ ಬಲವಾದ ಉದ್ದೇಶ ಇರಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಹಿರಿಯರಿಂದ ಬಂದ ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸುವ ಕಾರ್ಯ ಆಗಬೇಕು ಎಂದರು.
ಬಂಟ್ವಾಳ ತಾಲೂಕು ಗ್ಯಾರೇಜು ಮಾಲಕರ ಸಂಘದ ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಮಾತನಾಡಿ ಸನಾತನ ಧರ್ಮದ ಬಂಧುಗಳು ಜೊತೆಯಾಗಿ ಸೇರಿ ಸಂಭ್ರಮಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸಂಧ್ಯಾರಾಣಿ ಹಾಗೂ
ತುಂಬೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಂದೀಪ್ ಕುಲಾಲ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಪ್ರಕಾಶ್ ಜೆ.ಎಸ್, ತುಂಬೆ ಶ್ರೀ ಶಾರದ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವ ಬಂಗೇರ ಪೇರ್ಲಬೈಲು, ಬಂಟ್ವಾಳ ತಾಲೂಕು ಗ್ಯಾರೇಜು ಮಾಲಕರ ಸಂಘದ ಕಾರ್ಯದರ್ಶಿ ಉಮೇಶ್ ಶೆಟ್ಟಿ, ಬೊಳ್ಳಾರಿ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿ, ಮೂರ್ತೆದಾರರ ಮಹಾಮಂಡಲದ ಉಪಾಧ್ಯಕ್ಷ
ರಾಜೇಶ್ ಸುವರ್ಣ, ಗ್ಯಾರೇಜು ಮಾಲಕರ ಸಂಘದ ಕೋಶಾಧಿಕಾರಿ ರಮೇಶ್ ಭಂಡಾರಿ, ಗೌರವ ಸಲಹೆಗಾರರಾದ ವಿಶ್ವನಾಥ ಬಿ. ಸುಧಾಕರ ಸಾಲ್ಯಾನ್
ಸತೀಶ್ ಶೆಟ್ಟಿ, ಪ್ರಮುಖರಾದ ಮಹಾಬಲ ಮಜಿ, ತಾರಾನಾಥ ಕೊಟ್ಟಾರಿ ತೇವು, ಯೋಗೀಶ್ ಕಜೆಕಂಡ, ಸಂತೋಷ್ ಕೋಟ್ಯಾನ್, ತುಂಬೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹೇಮಲತಾ ಜಿ.ಪೂಜಾರಿ, ಆಶೀರ್ವಾದ್ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಅಧ್ಯಕ್ಷ ರಂಜಿತ್, ಕಾರ್ಯದರ್ಶಿ ಪ್ರವೇಶ್, ಆಶೀರ್ವಾದ್ ಮಹಿಳಾ ಸಂಘದ ಅಧ್ಯಕ್ಷೆ
ಜಲಜಾಕ್ಷಿ ಕೋಟ್ಯಾನ್, ಕಾರ್ಯದರ್ಶಿ ಶೃತಿ ಬೊಳ್ಳಾರಿ, ಗೌರವ ಸಲಹೆಗಾರರಾದ ದೇವಪ್ಪ ಗೌಡ, ನಾರಾಯಣ ಕಿರೋಡಿಯನ್, ಶೇಖರ್ ಬೊಳ್ಳಾರಿ ಉಪಸ್ಥಿತರಿದ್ದರು. ಚಿತ್ರನಟ ರವಿರಾಮಕುಂಜ ಮತ್ತಿತರರು ಭಾಗವಹಿಸಿದ್ದರು.
ಸಂಚಾಲಕ ಸುಶಾನ್ ಆಚಾರ್ಯ ಸ್ವಾಗತಿಸಿ, ವಂದಿಸಿದರು.
ಯೋಗೀಶ್ ಬೊಳ್ಳಾರಿ ಕಾರ್ಯಕ್ರಮ ನಿರೂಪಿಸಿದರು
Advertisement







