
ಬಂಟ್ವಾಳ: ಜೆಸಿಐ ಬಂಟ್ವಾಳದ ನೇತೃತ್ವದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘದ ದ.ಕ. ಜಿಲ್ಲಾ ಸಮಿತಿಯ ಸಹಕಾರದೊಂದಿಗೆ ಬಡಗಬೆಳ್ಳೂರು ಗ್ರಾಮದ ವರಟೀಲು ನಿವಾಸಿ ಲಕ್ಷ್ಮೀ ಅವರ ಕುಟುಂಬಕ್ಕೆ ನಿರ್ಮಿಸಿದ ಶ್ತೀ ಲಕ್ಷ್ಮೀ ಜೆಸಿ ನಿವಾಸ ಮನೆಯ ಹಸ್ತಾಂತರ ಕಾರ್ಯಕ್ರಮ ಭಾನುವಾರ ನಡೆಯಿತು.
ಜೆಸಿಐ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್. ಆಚಾರ್ಯ ಲಕ್ಷ್ಮೀ ಅವರಿಗೆ ಮನೆ ಹಸ್ತಾಂತರಿಸಿದರು. ಬಳಿಕ ಅವರು ಮಾತನಾಡಿ ಜೆಸಿಐಯಲ್ಲಿ ಇಂತಹ ಶಾಶ್ವತ ಯೋಜನೆಗಳು ಆಗಬೇಕೆನ್ನುವುದು ನಮ್ಮ ಆಶಯ. ಜೆಸಿಐ ಬಂಟ್ವಾಳ ಇದನ್ನು ಪ್ರತೀವರ್ಷ ಸಾಬೀತು ಮಾಡಿಕೊಂಡು ಬರುತ್ತಿದೆ.ಇಂತಹ ಜನೋಪಯೋಗಿ ಶಾಶ್ವತ ಯೋಜನೆಗಳು ಜೆಸಿಐ ಬಂಟ್ವಾಳದಿಂದ ನಿರಂತರವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದು ಅತ್ಯಂತ ಪುಣ್ಯದ ಕೆಲಸ. ಅಸಾಧ್ಯವಾದುದು ಎನ್ನುವುದು ಜಗತ್ತಿನಲ್ಲಿ ಯಾವುದೂ ಇಲ್ಲ. ಸಂಘಟಿತ, ಯೋಜನಾಬದ್ದವಾದ ಪ್ರಯತ್ನಗಳಿದ್ದಾಗ ಇಙತಹ ಅದ್ಭುತ ಕಾರ್ಯಗಳು ನಡೆಯಲು ಸಾಧ್ಯ.ಅಂತಹ ಕಾರ್ಯವನ್ನು ಜೆಸಿಐ ಬಂಟ್ವಾಳ ಮಾಡಿದೆ ಎಂದರು.

ಜೆಸಿಐ ಬಂಟ್ಚಾಳದ ಅಧ್ಯಕ್ಷ ಕಿಶೋರ್ ಕುಮಾರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಲಯ ಉಪಾಧ್ಯಕ್ಷ ಕಾಶೀನಾಥ ಗೋಗಟೆ, ಸುಹಾಸ್ ಮರಿಕೆ, ನಿಕಟ ಪೂರ್ವಾಧ್ಯಕ್ಷ ಗಣೇಶ್ ಕೆ. ಕುಲಾಲ್, ಪ್ರೋಜೆಕ್ಟ್ ಡೈರೆಕ್ಟರ್ ಸದಾನಂದ ಬಂಗೇರ, ಜೆಸಿಐ ಬಂಟ್ವಾಳದ ಕಾರ್ಯದರ್ಶಿ ಕಿರಣ್ ಕುಮಾರ್ ವೇದಿಕೆಯಲ್ಲಿದ್ಸರು.
ವಲಯಾಡಳಿತ ಮಂಡಳಿ ಪದಾಧಿಕಾರಿಗಳು, ಜೆಸಿಐ ಬಂಟ್ವಾಳದ ಪೂರ್ವಾಧ್ಯಕ್ಷರು, ಸದಸ್ಯರು, ಆದಿದ್ರಾವಿಡ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದಕ್ಕಿಂತ ಮೊದಲು ಜೆಸಿಐ ಬಂಟ್ವಾಳದ ವತಿಯಿಂದ ಪೊಲೀಸ್ ಇಲಾಖೆಗೆ ಬ್ಯಾರಿಕೇಡ್ ಹಸ್ತಾಂತರಿಸಲಾಯಿತು


Advertisement







