
ಬಂಟ್ವಾಳ: ಇಲ್ಲಿನ ಮೂಡನಡುಗೋಡು ಗ್ರಾಮದ ದಡ್ಡಲಕಾಡು ಶ್ರೀ ಜಗದಾಂಬಿಕ ಕ್ಷೇತ್ರದ ೨೦೨೬-೨೭ನೇ ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಕೇದಾಯಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪುರುಷೋತ್ತಮ ಪೂಜಾರಿ ದಡ್ಡಲಕಾಡು, ಕೃಷ್ಣಪ್ಪ ನಾಯ್ಕ ಸೇಸಗುರಿ, ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಡಿ., ಕೋಶಾಧಿಕಾರಿಯಾಗಿ ರೋಹಿತ್ ಕುಮಾರ್, ಉಪಾಧ್ಯಕ್ಷರಾಗಿ ಮನೋಹರ ಎಸ್. ನೆಕ್ಕರೆ, ಪ್ರವೀಣ್ ಡಿ., ಜೊತೆ ಕಾರ್ಯದರ್ಶಿಯಾಗಿ ಯತೀಶ್ ಎನ್., ರಾಮಕೃಷ್ಣ ಪೂಜಾರಿ, ಗೌರವ ಸಲಹೆಗಾರರಾಗಿ ವಿಶ್ವನಾಥ ಪೂಜಾರಿ ಡೆಚ್ಚಾರ್, ಪುರುಷೋತ್ತಮ ಪೂಜಾರಿ ಬನತ್ತೋಡಿ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಡಿ. ದಡ್ಡಲಕಾಡು, ತಾರಾನಾಥ ಸಪಲ್ಯ ದಡ್ಡಲಕಾಡು, ಉಮೇಶ್ ಪೂಜಾರಿ ದಡ್ಡಲಕಾಡು ಸಹಾಯಕ ಕಾರ್ಯದರ್ಶಿಯಾಗಿ ತೀರ್ಥಕುಮಾರ್ ಬನತ್ತೋಡಿ, ಶರತ್ ನಾವೂರು, ಮಹಿಳಾ ಪ್ರತಿನಿಧಿಯಾಗಿ ಹೇಮಾವತಿ ಬನತ್ತೋಡಿ, ರೂಪಾಶ್ರೀ ಡೆಚ್ಚಾರ್, ಮೀನಾಕ್ಷಿ ಬಿ.ದಡ್ಡಲಕಾಡು ಆಯ್ಕೆಯಾದರು.


Advertisement







