ಬಂಟ್ವಾಳ: ಮಾಣಿಯ ಶೇರಾದ ಐಡಿಯಲ್ ಕ್ಯಾಶೂ ಇಂಡಸ್ಟ್ರೀಸ್ಗೆ ಶಾಲಾ ಬೇಸಿಗೆ ರಜಾದಿನಗಳಲ್ಲಿ ಕೆಲಸಕ್ಕೆ ಬರುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.ಪ್ರತಿಭಾವಂತ ವಿದ್ಯಾರ್ಥಿನಿಯರಾದ ಸುಮಲತಾ, ಚಿತ್ರ, ತೇಜಾಕ್ಷಿ ಹಾಗೂ ಪ್ರಜ್ಞಾ, ಪ್ರತೀಕ್ಷಾ, ಆಶಿಕಾ, ಮೋಕ್ಷಿತಾ, ಅಂಕಿತ ಅವರನ್ನು ಕ್ಯಾಶೂ ಇಂಡಸ್ಟ್ರೀಸ್ ಆಡಳಿತ ಮಂಡಳಿ ಪರವಾಗಿ ಶಾಲು ಹೊದಿಸಿ, ಪುಷ್ಪ ಹಾಗೂ ನಗದು ಪುರಸ್ಕಾರ ನೀಡಿ ಕಾರ್ಖಾನೆ ಮಾಲಕರಾದ ಗಂಗಾಧರ ಶೇರಾ, ಆಡಳಿತಾಧಿಕಾರಿ ಶೇಷಪ್ಪ ಮಾಸ್ಟರ್, ಮಂಗಳೂರು ಅನಿಲ್ ಕಂಪ್ಯೂಟರ್ ಮಾಲಕ ಅನಿಲ್ರವರು ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಖಾನೆಯ ತಾಂತ್ರಿಕ ತಜ್ಞ ಶ್ರೀಧರ್, ಪ್ರಮುಖರಾದ ನೂತನ್ ಕುಮಾರ್, ಚಂದ್ರಶೇಖರ್ ಸೌಮ್ಯ ,ತೇಜಶ್ವಿನಿ, ತೇಜಶ್ರೀ, ಶ್ರೀಜಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶೇರಾ ಐಡಿಯಲ್ ಕ್ಯಾಶ್ಯೂ ಇಂಡಸ್ಟ್ರೀಸ್ ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ
