ಬಂಟ್ವಾಳ: ದೇಶದ ಹಿರಿಯ ಹೋರಾಟಗಾರ, ಪ್ರಪಂಚದ ಎರಡನೇ ಗಾಂಧಿ, ಪದ್ಮಶ್ರೀ, ಪದ್ಮವಿಭೂಷಣ, ಡಾ. ಅಣ್ಣ ಹಜಾರೆಯವರನ್ನು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ವತಿಯಿಂದ ಪುಣೆಯ ರಾಲೇಗಾನ್ ಸಿದ್ದಿಯಲ್ಲಿ ಮಂಗಳವಾರ ಭೇಟಿ ಮಾಡಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಗೌರವಾಧ್ಯಕ್ಷ ಎಸ್. ರಾಜಶೇಖರ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಸದಸ್ಯರಾದ ಅಶೋಕ್ ಎ. ಚಿಕ್ಕಬಳ್ಳಾಪುರ, ವಿಕ್ರಮ್ ಹರೇಕಳ, ಮಯೂರ್ ಕೀರ್ತಿ, ರಾಮಚಂದ್ರ ಪೂಜಾರಿ ಹಾಜರಿದ್ದರು.