ಮಂಗಳೂರು: ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಇದರ ಸುರತ್ಕಲ್ ಶಾಖೆ ಹಾಗೂ ಉತ್ಪನ್ನಗಳ ಮಾರಾಟ ಮಳಿಗೆಯು ಸುರತ್ಕಲ್ ನ ಅಂಚೆ ಕಚೇರಿ ಮುಂಭಾಗದಲ್ಲಿರುವ ಶಂಕರ ಸದಸನದಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆ ಹಾಗೂ ಮಾರಾಟ ಮಳಿಗೆಯನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸವಿತಾ ಸೌಹಾರ್ದ ಸಹಕಾರಿ ಸಂಘ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯಿಂದ ಸುರತ್ಕಲ್ ಪರಿಸರದ ಜನರಿಗೆ ಉಪಯೋಗವಾಗಲಿದೆ ಎಂದರು. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಗ್ರಾಹಕರು ಸಾಲ ಪಡೆಯಲು ಸಾಕಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಸಹಕಾರಿ ಸಂಘಗಳು ಗ್ರಾಹಕನ ವಿಶ್ವಾಸದ ಮೇಲೆ ವ್ಯವಹಾರ ಮಾಡುತ್ತವೆ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಹಕಾರಿ ಸಂಘದಿಂದ ಸಾಧ್ಯವಾಗಿದೆ ಎಂದ ಅವರು
ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಕ್ಷೌರಿಕ ವೃತ್ತಿ ಮಾಡುವವರಿಗೆ ನೂತನ ಮಳಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಸವಿತಾ ಸಮಾಜ ಸಾಮಾಜಿಕ ನ್ಯಾಯದಿಂದ ವಂಚಿತವಾದ ಸಮಾಜ. ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಮರೆಯಬಾರದು ಎಂದು ತಿಳಿಸಿದರು. ಕಾಲಸ್ಥಿತಿಗೆ ಅನುಗುಣವಾಗಿ ನಾವು ಬದಕಬೇಕಾಗಿದೆ. ಸಮಾಜದ ಅಭಿವೃದ್ದಿಯಾಗಬೇಕಾದರೆ ಸಹಕಾರಿ ಸಂಘ ಹಾಗೂ ಶಿಕ್ಷಣ ಸಂಸ್ಥೆಗಳು ಬೇಕು. ಇಚ್ಚಾಶಕ್ತಿಯಿದ್ದಲ್ಲಿ ಇದು ಸವಿತಾ ಸಮಾಜದಿಂದ ಸಾಧ್ಯವಿದೆ. ಸ್ವಾವಲಂಭಿಗಳಾದಾಗ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಿದೆ. ಸಂಘ ಗಟ್ಟಿಯಾದಗ ಸಮಾಜ ಗಟ್ಟಿಯಾಗುತ್ತದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಸುರತ್ಕಲ್ ಶಾಖೆ ಅಭಿವೃದ್ದಿಯಾಗಲು ಎಲ್ಲರ ಸಹಕಾರವನ್ನು ಕೋರಿದರು. ಮುಂದಿನ ದಿನಗಳಲ್ಲಿ ಕಿನ್ನಿಗೋಳಿ ಅಥವಾ ಮೂಡಬಿದಿರೆಯಲ್ಲಿ ನೂತನ ಶಾಖೆ ತೆರೆಯುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಸತೀಶ್ ಸದಾನಂದ, ರಮೇಶ್ ಭಂಡಾರಿ ಬೊಟ್ಯಾಡಿ
ರವೀಂದ್ರಭಂಡಾರಿ ಕಾಟಿಪಳ್ಳ, ಕುಶಲ್ , ಸಂಘದ ಉಪಾಧ್ಯಕ್ಷ ಸುರೇಶ್ ನಂದೊಟ್ಟು, ನಿರ್ದೇಶಕ
ದಿನೇಶ್ ಎಲ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಎಸ್ ಸಿ ಡಿಸಿಸಿ ಬ್ಯಾಂಕಿನ ನಿವೃತ್ತ ಡಿಜಿಎಂ
ಉಗ್ಗಪ್ಪ ಶೆಟ್ಟಿ ಕೊಂಬಿಲ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ
ಆನಂದ ಭಂಡಾರಿ ಹೊಸಬೆಟ್ಟು, ಪಾಲಿಕೆ ಸದಸ್ಯರಾದ ವರುಣ್ ಚೌಟ, ನಯನ ಆರ್. ಕೋಟ್ಯಾನ್
ಸವಿತಾ ಶಶಿಧರ್, ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಅಧ್ಯಕ್ಷ ನವೀನ್ ಚಂದ್ರ ಭಂಡಾರಿ, ಸವಿತಾ ಸಮಾಜ ಸುರತ್ಕಲ್ ವಲಯದ ಅಧ್ಯಕ್ಷ ಜಗದೀಶ್, ಮಂಗಳೂರು ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಮುರಳೀಧರ ಭಂಡಾರಿ
ಉಡುಪಿ ಜಿಲ್ಲಾ ಪರಿಯಾಳ ಸುಧಾರಕ ಸಂಘ ಮಾಜಿ ಅಧ್ಯಕ್ಷ ಜಯಂತ್ ಸುವರ್ಣ ಬಜ್ಪೆ, ಭವಾನಿ ವಿಠಲ ಭಂಡಾರಿ ಕುಳಾಯಿ, ಕಟ್ಟಡದ ಮಾಲಕ ಐ.ವಿಠಲ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಸುರೇಶ್ ನಂದೊಟ್ಟು ಸ್ವಾಗತಿಸಿದರು, ದಿನೇಶ್ ಎಲ್. ಬಂಗೇರ ಪ್ರಾಸ್ತವಿಕವಾಗಿ ಮಾತನಾಡಿದರು, ಪತ್ರಕರ್ತ ಕಿರಣ್ ಸರಪಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿಶನ್ ವಂದಿಸಿದರು.