ಬಂಟ್ವಾಳ: ನೇಪಾಲದಲ್ಲಿ ಪಿಸಿಎ ಸ್ಪೋರ್ಟ್ಸ್ ಈವೆಂಟ್ಸ್ ಮ್ಯಾನೇಜ್ಮೆಂಟ್ ವತಿಯಿಂದ ನಡೆದ ಇಂಡೋ-ನೇಪಾಲ್ ಇಂಟರ್ನ್ಯಾಷನಲ್ ಇನ್ವಿಟೇಶನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್ನ ತ್ರೋಬಾಲ್ ಪಂದ್ಯಾಟದಲ್ಲಿ ಭಾರತ ಚಾಂಪಿಯನ್ ಪ್ರಶಸ್ತಿ ಪಡೆದಿದ್ದು, ತಂಡದಲ್ಲಿ ಭಾಗವಹಿಸಿದ್ದ ಬಂಟ್ವಾಳ ಚಂಡ್ತಿಮಾರಿನ ಸುಪ್ರಿಯಾ ಎಸ್.ಪಿ. ಅವರು ಬೆಸ್ಟ್ ಪ್ಲೇಯರ್ ಪ್ರಶಸ್ತಿ ಪಡೆದಿದ್ದಾರೆ. ಅವರು ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಜತೆಗೆ ಪುರುಷರ ತಂಡವನ್ನು ಚಂಡ್ತಿಮಾರಿನ ಪ್ರಜ್ವಲ್ ಎಸ್.ಪಿ, ರಕ್ಷಿತ್ ಆರ್. ಅವರು ಪ್ರತಿನಿಧಿಸಿದ್ದರು.
Advertisement
Advertisement