ಬಂಟ್ವಾಳ: ಸಮೃದ್ಧಿ ಎಜುಕೇಷನ್ ಟ್ರಸ್ಟ್ (ರಿ) ಇದರ ಆಶ್ರಯದಲ್ಲಿ ತಾಲೂಕಿನ ವಿಶೇಷ ಚೇತನ ಮಕ್ಕಳಿಗಾಗಿ ಸಮೃದ್ಧಿ ವಿಶೇಷ ಚೇತನ ಮಕ್ಕಳ ಶಾಲೆ ಬಿ.ಸಿ.ರೋಡಿನ ಕೈಕಂಬ ಬಳಿ ಜೂನ್.6ರಿಂದ ಆರಂಭಗೊಳ್ಳಲಿದೆ.
ಮಕ್ಕಳಿರಲವ್ವ ಮನೆಯಲ್ಲಿ ಎಂದು ಹಿರಿಯರು ಹಾರೈಸುತ್ತಿದ್ದರು. ಆ ಮಕ್ಕಳು ಮನೆಯಲ್ಲಿ ನಲಿದಾಡುತ್ತಿದ್ದರೆ ಹೆತ್ತವರಿಗೂ ಆನಂದ. ಆದರೆ ಮಕ್ಕಳ ಬೆಳವಣಿಗೆ ದೈಹಿಕವಾಗಿ, ಮಾನಸಿಕವಾಗಿ ಕುಂಠಿತವಾಗಿದ್ದರೆ ಆ ನೋವು ಹೆತ್ತವರಿಗಷ್ಟೇ ಗೊತ್ತು. ನಮ್ಮ ಮಗು ಇತರ ಮಗುವಿನಂತಿಲ್ಲ, ಇದು ದೇವರ ಶಾಪ ಎಂದು ಕೊರಗುವವರೇ ಹೆಚ್ಚು. ಆದರೆ ಇದು ಭಗವಂತನ ಶಾಪವಲ್ಲ, ಅವನ ಸೃಷ್ಟಿಯಲ್ಲೊಂದು ಸುಂದರ ಹೂವುಗಳು. ಇಂತಹ ಸುಂದರ ಹೂವುಗಳಿಗಾಗಿಯೇ ಸಮೃದ್ದಿ ಸಂಸ್ಥೆ ವಿಶೇಷ ಚೇತನ ಮಕ್ಕಳ ಶಾಲೆಯನ್ನು ಆರಂಭಿಸುತ್ತಿದೆ. ಆಸಕ್ತರು ಮೇ.20ರ ಒಳಗಾಗಿ ಸಂಸ್ಥೆಯ ಮುಖ್ಯಸ್ಥೆ ಪ್ರತಿಭಾ ಎಸ್. (ದೂರವಾಣಿ ಸಂಖ್ಯೆ: 7259275773) ಅವರನ್ನು ಸಂಪರ್ಕಿಸಿ ಮಗುವಿನ ಹೆಸರನ್ನು ನೋಂದಾಯಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.