ಬಂಟ್ವಾಳ: ಸಿದ್ದಕಟ್ಟೆ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಇದರ 3ನೇ ಮಾವಿನ ಕಟ್ಟೆ ಶಾಖೆಯ ಉದ್ಘಾಟನಾ ಸಮಾರಂಭ ಎಲಿಯನಡುಗೋಡು ಗ್ರಾಮದ ಮಾವಿನಕಟ್ಟೆಯಲ್ಲಿರುವ ಶ್ರೀ ಚಾಮುಂಡೇಶ್ವರೀ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ
ಪ್ರಾಮಾಣಿಕತೆ, ವಿಶ್ವಾಸದ ಆಧಾರದಲ್ಲಿ ನಡೆಯುತ್ತಿರುವ ಅತೀ ದೊಡ್ಡ ಆರ್ಥಿಕ ಸಂಸ್ಥೆ ಸಹಕಾರಿ ಸಂಘಗಳಾಗಿದೆ. ಬ್ಯಾಂಕಿಗಳಿಗಿಂತ ಸುಲಭವಾಗಿ ಹಣಕಾಸಿನ ಸಹಕಾರ ಸಹಕಾರಿ ಸಂಘದ ಮೂಲಕ ಸಿಗುತ್ತದೆ. ದೇಹಕ್ಕೆ ಅಂಗಗಳು ಹೇಗೆ ಪೂರಕವಾಗಿದೆಯೋ ಅದೆ ರೀತಿ ಸಹಕಾರಿ ಸಂಘ ಸಮಾಜದ ಬೆಳವಣಿಗೆಗೂ ಪೂರಕವಾಗಿದೆ. ಕಷ್ಟದಲ್ಲಿದ್ದವನಿಗೆ ಸಹಕಾರಿ ಸಂಘ ಸಹಾಯವನ್ನು ಮಾಡುತ್ತದೆ. ಈ ಸಹಕಾರಿ ಸಂಘ ಇನ್ನಷ್ಟು ಶಾಖೆಗಳನ್ನು ತೆರೆದು ಅಭಿವೃದ್ದಿಯಾಗುವುದರ ಜೊತೆಗೆ ಸಮಾಜದ ಜನರಿಗೂ ಸಹಕರಿಸುವ ಸಂಸ್ಥೆಯಾಗಲಿ ಎಂದು ಶುಭಹಾರೈಸಿದರು.
ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಪ್ರತೀ ಗ್ರಾಮ ಪಂಚಾಯತಿನಲ್ಲಿ ಸಹಕಾರಿ ಸಂಘಗಳನ್ನು ತೆರೆದು ಎಲ್ಲಾ ರೈತರಿಗೂ ಸಹಕಾರಿ ಸೌಲಭ್ಯಗಳು ಸಿಗುವಂತಾಗಬೇಕು ಎನ್ನುವ ಕೇಂದ್ರ ಸರಕಾರದ ಪರಿಕಲ್ಪನೆಯಂತೆ ಈ ಭಾಗದ ರೈತರ ಬೇಡಿಕೆಗನುಗುಣವಾಗಿ ಇಲ್ಲಿ ಶಾಖೆಯನ್ನು ಆರಂಭಿಸಲಾಗಿದೆ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜಾರಾಂ ಭಟ್ ಟಿ.ಜಿ. ಭದ್ರತಾ ಕೊಠಡಿ ಉದ್ಘಾಟಿಸಿದರು.
ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷ ಶೇಖರ್ ಶೆಟ್ಟಿ ಕಂಪ್ಯೂಟರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳು ಪ್ರಥಮ ಠೇವಣಿ ಪತ್ರ ಬಿಡುಗಡೆಗೊಳಿಸಿದರು, ನಿತ್ಯ ನಿಧಿ ಸಂಗ್ರಹದ ಯಂತ್ರ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ, ಸಂಘದ ಮಾಜಿ ಅಧ್ಯಕ್ಷ ಗೋಪಿನಾಥ ರೈ
ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜಾ, ಕುಕ್ಕಿಪಾಡಿ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ, ಪಂಚಾಯತಿ ಸದಸ್ಯರಾದ
ಯೋಗೀಶ್ ಆಚಾರ್ಯ, ಚಂದ್ರ ಪೂಜಾರಿ, ದಿನೇಶ್ ಸುಂದರ ಶಾಂತಿ, ಗೀತಾ, ಸುಜಾತ, ಪುಷ್ಪ, ಲಿಂಗಪ್ಪ ಪೂಜಾರಿ ಹಲಾಯಿ, ಪ್ರತಿಭಾ ಶೆಟ್ಟಿ,
ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ, ಹಾಗೂ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನಿರ್ದೇಶಕಿ ಮಂದಾರತಿ ಶೆಟ್ಟಿ ವಂದಿಸಿದರು, ಸಿಬ್ಬಂದಿ ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.