ಬಂಟ್ವಾಳ: ಶ್ರೀಮತೀ ಲಕ್ಷ್ಮೀ ದೇವಿ ನರಸಿಂಹ ಪೈ ವಿದ್ಯಾಲಯ,ಪಾಣೆಮಂಗಳೂರು ಇಲ್ಲಿ ಮಕ್ಕಳ ಚಿತ್ರಕಲಾ ಪ್ರದರ್ಶನ ಇತ್ತೀಚೆಗೆ ನಡೆಯಿತು. ಚಿತ್ರಕಲಾ ಶಿಕ್ಷಕ ಯಶು ಸ್ನೇಹಗಿರಿ ಅವರ ನಿರ್ದೇಶನದಲ್ಲಿ ನಡೆದ ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಶಾರದಾ ಪ್ರೌಢ ಶಾಲೆಯ ಹಿರಿಯ ಕಲಾ ಶಿಕ್ಷಕಿ ಸುಮಿತ್ರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
Advertisement
ಎಸ್ ಎಲ್ ಎನ್ ಪಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ವೇತಾ ಕಾಮತ್, ಶ್ರೀ ಶಾರದಾ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯ ಭೋಜ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ನಾನಾ ರೀತಿಯ ಕಲಾ ಪ್ರಕಾರಗೊಳನ್ನೊಳಗೊಂಡ ಪ್ರದರ್ಶನದಲ್ಲಿ 400ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಗೊಂಡದ್ದು ವಿಶೇಷವಾಗಿತ್ತು. ವಿದ್ಯಾಲಯದ ವಿದ್ಯಾರ್ಥಿಗಳು, ಶಾರದಾ ಶಾಲೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಆಗಮಿಸಿ ಕಲಾ ಪ್ರದರ್ಶನವನ್ನು ಕಣ್ತುಂಬಿಕೊಂಡರು. ವಿದ್ಯಾರ್ಥಿಗಳ ಕಲಾಸಾಧನೆಯನ್ನು ಮೆಚ್ಚಿ ಗಣ್ಯರು ಶುಭ ಹಾರೈಸಿದರು. ವರ್ಣ ವರ್ಣದ ಕಲಾಕ್ಥತಿಗಳು ನೋಡುಗರ ಕಣ್ಮನ ಸೆಳೆಯಿತು.
Advertisement