
ಬಂಟ್ವಾಳ: ನಾವೂರು ಗ್ರಾಮದ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವಸ್ಥಾನದಲ್ಲಿ ಶ್ರೀ ಸುಬ್ರಾಯ ವಿಷ್ಣುಮೂರ್ತಿ ನಾವೂರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ನಡ್ವಾಂತಾಡಿ ಶ್ರೀಪಾದ ಪಾಂಗಣ್ಣಯರ ನೇತೃತ್ವದಲ್ಲಿ ಜ.31 ಹಾಗೂ ಫೆಬ್ರವರಿ 1ರಂದು ನಡೆಯಲಿದೆ.

ಜ.31 ರಂದು ಬುಧವಾರ ಸಂಜೆ 5.30 ರಿಂದ ಸ್ವಸ್ತಿ ಪುಣ್ಯಾಹ ವಾಚನ, ದುರ್ಗಾ ನಮಸ್ಕಾರಪೂಜೆ, ಮಹಾಪೂಜೆ, ಉತ್ಸವ ಬಲಿ, ವಸಂತಕಟ್ಟೆ ಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಫೆ.1ರಂದು ಬೆಳಿಗ್ಗೆ 8ರಿಂದ 12 ಕಾಯಿ ಗಣಹೋಮ, ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ದರ್ಶನ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6.30 ರಿಂದ ಶ್ರೀದೇವರಿಗೆ ರಂಗಪೂಜೆ, ಪ್ರಸಾಧ ವಿತರಣೆ, ಶ್ರೀ ವ್ಯಾಘ್ರ ಚಾಮುಂಡಿ ಕಲ್ಲುರ್ಟಿ, ಗುಳಿಗ ದೈವಗಳಿಗೆ ನೇಮೋತ್ಸವ ಅನ್ನಸಂತರ್ಪರ್ಪಣೆ ನಡೆಯಲಿದೆ. ಫೆ. 2ರಂದು ಸಂಪ್ರೋಕ್ಷಣಾ ಕಲಶ, ಮಂತ್ರಾಕ್ಷತೆ, ಪ್ರಸಾದವಿತರಣೆ ನಡೆಯಲಿದೆ.
