ಬಂಟ್ವಾಳ: ಪ್ರಧಾನಿಯವರ ಕಲ್ಪನೆಯಾದ ಕ್ಷಯ ಮುಕ್ತ ಭಾರತ ನಿರ್ಮಣ ಮಾಡುವಲ್ಲಿ ಸೇವಾ ಸಂಸ್ಥೆಯಾಗಿರುವ ಸೇವಾಂಜಲಿಯ ಕಾರ್ಯ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಕ್ಷಯ ರೋಗಿಗಳಿಗೆ ಆಹಾರಧಾನ್ಯದ ಕಿಟ್ ವಿತರಿಸಿ ಮಾತನಾಡಿದರು. ದೇಶದ ಸಾಮಾನ್ಯ ಜನರ ಆರೋಗ್ಯ ಕಾಳಜಿಯನ್ನು ವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್, ಜನೌಷಧಿ ಕೇಂದ್ರ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದ್ದು ಇಂದು ಅನೇಕ ಮಂದಿ ರೋಗಿಗಳ ಬಾಳಿಗೆ ಆಶಾಕಿರಣವಾಗಿದ್ದಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಮ್ಮ ಆರೋಗ್ಯ ಸ್ಥಿರವಾಗಿರಬೇಕಾದರೆ ದುರಾಭ್ಯಾಸಗಳಿಂದ ದೂರ ಇರಬೇಕು. ದೇಹವೇ ದೇವಾಲಯ ಎನ್ನುವಂತೆ
ದೇಹ ಸುಸ್ಥಿತಿಯಲ್ಲಿದ್ದಾಗ ಕಾಯಿಲೆಗಳು ನಮ್ಮನ್ನು ಭಾದಿಸುವುದಿಲ್ಲ. ಸೇವಾಂಜಲಿ ಸಂಸ್ಥೆ ನಿರಂತರವಾಗಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಜನಸೇವೆ ಮಾಡುತ್ತಿರುವುದು ಅಭಿನಂದನೀಯ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ, ರಾಮದಾಸ್ ಬಂಟ್ವಾಳ, ತಾ.ಪಂ. ಮಾಜಿ ಸದಸ್ಯರಾದ ಸೋಮಪ್ಪ ಕೋಟ್ಯಾನ್, ಗಣೇಶ್ ಸುವರ್ಣ ತುಂಬೆ, ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ, ಪ್ರಕಾಶ್ ಕಿದೆಬೆಟ್ಟು, ಪದ್ಮನಾಭ ಕಿದೆಬೆಟ್ಟು, ಅಶೋಕ್ ಕುಲಾಲ್, ಜಯಶ್ರೀ ಕರ್ಕೆರ, ಎಂ.ಕೆ. ಖಾದರ್, ವಿಕ್ರಂ ಬರ್ಕೆ,
ತಾರಾನಾಥ ಕೊಟ್ಟಾರಿ ತೇವು, ಸುಕೇಶ್ ಶೆಟ್ಟಿ ತೇವು, ಭಾಸ್ಕರ ಚೌಟ ಕುಮ್ಡೇಲು, ಪ್ರಶಾಂತ್ ತುಂಬೆ, ದಿನೇಶ್ ಶೆಟ್ಟಿ ಕೊಟ್ಟಿಂಜ, ಎಫ್. ಗಣೇಶ, ಸುಕುಮಾರ್ ಅರ್ಕುಳ, ಮಧುರಾಜ್ ಶೆಟ್ಟಿ, ಹರಿಣಿ, ಯಮುನ, ಸುದೇಶ್, ಜಗದೀಶ್ ಗಟ್ಟಿ ತುಂಬೆ ಮೊದಲಾದವರಿದ್ದರು
ದೇವದಾಸ್ ಶೆಟ್ಟಿ ಕೊಡ್ಮಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.