ಮಾಣಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿ ಹಾಗೂ ಶ್ರೀಧಾಮ ಮಿತ್ರ ವೃಂದ ಇದರ ಆಶ್ರಯದಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಈ ಸಂದರ್ಭ ಸೇವಾ ಸಮಿತಿಯ ಟ್ರಸ್ಟಿಗಳಾದ ದಾಮೋದರ ಬಿ.ಎಂ., ಮಚ್ಚೇಂದ್ರನಾಥ ಸಾಲ್ಯಾನ್, ಮಂಜುವಿಟ್ಲ, ಲೋಕೆಶ್, ಮಹೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.