ಬಂಟ್ವಾಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವ ನರ್ತಕ ಸಜೀಪ ಮೂಡ ಗ್ರಾಮದ ಶೇಖರ ಪಂಬದ ಅವರಿಗೆ ಅಮ್ಟಾಡಿ ಗ್ರಾಮದ ಮಂಗ್ಲಿಮಾರು ಶ್ರೀ ಅಣ್ಣಪ್ಪ ಸ್ವಾಮಿ ಜುಮಾದಿ ಬಂಟ ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮಂಡಳಿ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು ಅವರ ನೇತೃತ್ವದಲ್ಲಿ ಸಮಿತಿ ವತಿಯಿಂದ ಅಭಿನಂದನ ಕಾರ್ಯಕ್ರಮ ರವಿವಾರ ಮಂಗ್ಲಿಮಾರು ದೈವಸ್ಥಾನದ ಆವರಣದಲ್ಲಿ ನಡೆಯಿತು.
ಬಿ.ಸಿ. ರೋಡ್ ಶ್ರೀ ಚಂಡಿಕಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಲೋಕನಾಥ ಶೆಟ್ಟಿ ಅವರು ಅಭಿನಂದನ ಭಾಷಣ ಮಾಡಿ, ತುಳುನಾಡು ದೈವಾರಾಧನೆಯ ಬೀಡಾಗಿದ್ದು, ಶ್ರದ್ಧೆ , ಭಕ್ತಿ, ನಿಷ್ಠೆಯಿಂದ ದೈವದ ಚಾಕರಿ ಮಾಡುವ ಶೇಖರ ಪಂಬದರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ದೈವಾರಾಧನೆಗೆ ಸಂದ ಗೌರವವಾಗಿದೆ. ಅವರಿಗೆ ಮತ್ತಷ್ಟು ಪ್ರಶಸ್ತಿಗಳು ಲಭಿಸಲಿ ಎಂದರು. ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ ಅವರು ಮಾತನಾಡಿ, ತಾಲೂಕಿನಾದ್ಯಂತ ದೈವ ನರ್ತನ ಸೇವೆ ಸಲ್ಲಿಸುವ ಶೇಖರ ಪಂಬದರನ್ನು ಮಂಗ್ಲಿಮಾರುನಲ್ಲಿ ಅಭಿನಂದಿಸುವ ಮೂಲಕ ರವಿಶಂಕರ ಶೆಟ್ಟಿ ಅವರು ಉತ್ತಮ ಕಾರ್ಯ ನಡೆಸಿದ್ದಾರೆ ಎಂದರು.
ಗಡಿಪ್ರಧಾನರಾದ ದಯಾನಂದ ಶೆಟ್ಟಿ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಿ.ಸಿ.ರೋಡು ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಸತೀಶ್ ಭಂಡಾರಿ, ಅರ್ಚಕ ನರಸಿಂಹ ಮಯ್ಯ, ಪ್ರಮುಖರಾದ ರಾಜೇಶ್ ಎಲ್. ನಾಯಕ್, ರಮೇಶ ಶೆಟ್ಟಿ, ಭಕ್ತ ಕುಮಾರ್ ಶೆಟ್ಟಿ, ಕಯ್ಯೋಳಿಮಾರ್ ಲಕ್ಕಣ್ಣ ಶೆಟ್ಟಿ, ಉಮೇಶ್ ಶೆಟ್ಟಿ, ಜಗದೀಶ ಕುಂದರ್, ಹರೀಶ್ ಶೆಟ್ಟಿ ಪಡು, ಭುವನೇಶ್ ಪಚ್ಚಿನಡ್ಕ, ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರೇಮನಾಥ, ನರಸಿಂಹ ಹೊಳ್ಳ
ಕೇಶವ ನಾಯ್ಕ, ಬಸಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಲೋಕೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
—