ಬಂಟ್ಚಾಳ: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂಸಿಸಿ ಬ್ಯಾಂಕ್ ಲಿ. ನ ಅಧ್ಯಕ್ಷ ಅನಿಲ್ ಲೋಬೋ ಅವರ ಅಭಿನಂದನಾ ಸಮಾರಂಭ ಎಂ ಸಿಸಿ ಬ್ಯಾಂಕ್ ಲಿ. ಅಭಿಮಾನಿ ಬಳಗದ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.
ಫರ್ಲಾ ವೆಲಂಕಣಿ ಚರ್ಚ್ ನ ಧರ್ಮಗುರುಗಳಾದ ವಂದನೀಯ ಜೋನ್ ಪ್ರಕಾಶ್ ಪಿರೇರಾ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಅನಿಲ್ ಲೋಬೋ ಅವರ ಜೀವನದಲ್ಲಿ ಅನೇಕ ಅಡಡತಡೆಗಳು ಬಂದರೂ ಅವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ್ದಾರೆ. ಯಾರೋ ಕಟ್ಟಿದ ಬ್ಯಾಂಕನ್ನು ಇಂದು ಅನಿಲ್ ಅವರು ಮುನ್ನಡೆಸುತ್ತಿದ್ದಾರೆ ಅವರ ಮೇಲೆ ದೇವರ ದಯೆ ಇದೆ. ಅನಿಲ್ ಅವರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಅನಿಲ್ ಲೋಬೊ ಮಾತನಾಡಿ ಗ್ರಾಹಕರೇ ದೇವರು ಎಂದು ಭಾವಿಸಿದಾಗ ಬ್ಯಾಂಕ್ ಬೆಳೆಯುತ್ತದೆ. ಪ್ರೋತ್ಸಾಹ ಇದ್ದಾಗ ಮಾತ್ರ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬೆಳೆಯಲು ಸಾಧ್ಯವಿದೆ. ಬ್ಯಾಂಕ್ ಪ್ರಗತಿಯ ಹಿಂದೆ ಕೆಲಸ ಮಾಡಿದವರು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಸಿಬ್ಬಂದಿಗಳು ಹಾಗೂ ಗ್ರಾಹಕರು. ಅವರಿಂದಾಗಿಯೇ ಈ ಪ್ರಶಸ್ತಿ ಬರಲು ಸಾಧ್ಯವಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್ ಅಭಿನಂದನಾ ಭಾಷಣ ಮಾಡಿ ಸಮಾಜದ ಒಳಿತಿಗಾಗಿ ಅಗತ್ಯತೆ ಇರುವವರಿಗೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಸಹಕಾರ ಕ್ಷೇತ್ರ ಹುಟ್ಟಿಕೊಂಡಿದೆ. ಇದೇ ರೀತಿ
ಮಂಗಳೂರು ಕೆಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಆರಂಭಗೊಂಡು ಸಮಾಜ ಹಾಗೂ ಸಮುದಾಯದ ಅಭಿವೃದ್ದಿಯ ಬಗ್ಗೆ ಕಾರ್ಯ ನಿರ್ವಹಿಸುತ್ತಿದೆ.
ಅನಿಲ್ ಲೋಬೋ ಅವರು ಎಂಸಿಸಿ ಬ್ಯಾಂಕ್ ವಿಶ್ವಾಸಾರ್ಹ ಬ್ಯಾಂಕ್ ಆಗಿ ಅಭಿವೃದ್ಧಿ ಪಡಿಸಲು ಅವಿರತ ಶ್ರಮಿಸಿದ್ದಾರೆ. ಬ್ಯಾಂಕನ್ನು ಹೆಚ್ಚು ಲಾಭದಾಯಕ ಬ್ಯಾಂಕ್ ಆಗಿ ಬೆಳೆಸಿದ್ದಾರೆ. ಪ್ರತಿಭಾವಂತರಾಗಿರುವ ಅನಿಲ್ ಲೋಬೋ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುವ ನಿಪುಣ. ಎರಡನೇ ಬಾರಿಗೆ ಚುನಾವಣೆ ಇಲ್ಲದೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಎಂ ಸಿಸಿ ಬ್ಯಾಂಕಿನ ಇತಿಹಾಸದಲ್ಲಿ ಪ್ರಥಮ ಎಂದರು.
ಮುಖ್ಯ ಅತಿಥಿಗಳಾಗಿ ಪಿಲಿಕುಲ ಅಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕವ ಪ್ರವೀಣ್ ಬಿ. ನಾಯಕ್, ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಉಪನ್ಯಾಸ ಅಬ್ದುಲ್ ರಝಾಕ್, ಗೌರವ ಅತಿಥಿಯಾಗಿ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅರುಣ್ ರೋಷನ್ ಡಿಸೋಜಾ, ಎಂಸಿಸಿ ಬ್ಯಾಂಕ್ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ಕೆಥೋಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಅಧ್ಯಕ್ಷೆ ಪ್ಲೇವಿ ಡಿಸೋಜಾ, ಎಂಸಿಸಿ ಬ್ಯಾಂಕ್ ನಿರ್ದೇಶಕ ವಿನ್ಸೆಂಟ್ ಲಸ್ರಾದೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂದೀಪ್ ಮಿನೇಜಸ್ ಸ್ವಾಗತಿಸಿ, ವಾಲ್ಟರ್ ನೋರೋನ್ಹ ವಂದಿಸಿದರು.ಸುನೀಲ್ ವೇಗಸ್ ಕಾರ್ಯಕ್ರಮ ನಿರೂಪಿಸಿದರು.