
ಬಂಟ್ವಾಳ: ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರುವಿನಿಂದ ಕಡೇಶಿವಾಲಯ ಗ್ರಾಮದ ಮಧ್ಯೆ ನೇತ್ರಾವತಿ ನದಿಗೆ ಸೌಹಾರ್ದ ಸೇತುವೆ ನಿರ್ಮಿಸಲು ೨೦೧೪ರಲ್ಲಿ ಮಾಜಿ ಸಚಿವ ಬಿ. ರಮನಾಥ ರೈವರ ಶಿಫಾರಸ್ಸಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಮಂಜೂರುಗೊಳಿಸಿದ್ದರು ಪ್ರಸ್ತುತ ಸೇತುವೆ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಕೆಆರ್ಡಿಸಿಎಲ್ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.


ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು 2024ರ ಜುಲೈ ತಿಂಗಳಿನಲ್ಲಿ ಸೌಹಾರ್ದ ಸೇತುವೆಯ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೆ ಸಿದ್ದಗೊಳಿಸುವಂತೆ ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಪ್ರಮುಖರಾದ ಬೇಬಿ ಕುಂದರ್, ಅಬ್ಬಾಸ್ ಅಲಿ, ಸಂಪತ್ ಕುಮಾರ್ಶೆಟ್ಟಿ, ಶಿವಪ್ಪ ಪೂಜಾರಿ, ಕಾಂಚಲಾಕ್ಷಿ, ವಿಮಲಾ, ಖಾದರ್, ಅಬ್ದುಲ್ ಹಮೀದ್ ಯಾನೆ ಚೇರಿಮೋನು, ಸುರೇಶ್ ಪೂಜಾರಿ, ದಾವೂದ್, ಈಶ್ವರ ಪೂಜಾರಿ, ಹರಿಶ್ಚಂದ್ರ ಕಾಡಬೆಟ್ಟು, ಸಂಜೀವ ಕಡೇಶಿವಾಲಯ, ಸಂಜೀವ ಪೂಜಾರಿ ದಾಸಕೋಡಿ, ಫಾರೂಕ್, ಗೀತಾ, ಸಂಜೀವ ಪೂಜಾರಿ ಕಟ್ಟದಡೆ, ದಿನೇಶ್ ಭಟ್, ಪುವಪ್ಪ ಪೂಜಾರಿ ಆಗಚರಕೋಡಿ, ವಿಜಯ ಕುಮಾರ್ ಎಸ್, ಶೀನಾ ನಾಯ್ಕ, ನಳಿನಾಕ್ಷಿ, ರತ್ನಕಾರ ನಾಯ್ಕ, ಪುರುಷೋತ್ತಮ ಶೆಟ್ಟಿ, ಸಲೀಂ ಕಜೆ, ಪೂವಪ್ಪ ಪ್ರಮುಖರದವರು ಉಪಸ್ಥಿತರಿದ್ದರು.
