ಬಂಟ್ವಾಳ: ನಾವೂರು ಸರಕಾರಿ ಪ್ರೌಢಶಾಲೆಯ ವಾರ್ಷಿಕ ಕ್ರೀಡಾಕೂಟ ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ಅರ್ಚನಾ ಸಿ.ಪಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಾಠ ಪ್ರವಚನಗಳ ಜೊತೆ ಕ್ರೀಡೆಯಲ್ಲಿ ಭಾಗವಹಿಸುವುದ್ದರಿಂದ ನಮ್ಮ ದೇಹ ಸದೃಢ ವಾಗುವುದ್ದಲ್ಲದೆ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅಥಿತಿಗಳಾಗಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸುನೀತಾ, ಪ್ರೌಢ ಶಾಲಾ ಶಿಕ್ಷಕರಾದ ವಿದ್ಯಾಕುಮಾರಿ, ಕವಿತಾ ಭಂಡಾರಿ, ವಲೇರಿಯನ್ ಗಿಲ್ಬರ್ಟ್ ಡಯಾಸ್, ರೂಪ ನಾಟಿಕರ , ಆತ್ಮಿಕ, ರಮ್ಯ, ವಿದ್ಯಾರ್ಥಿ ನಾಯಕಿ ನಿಖಿತ ಹಾಜರಿದ್ದರು. ಚ
ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ.ಕೆ ಜಾಲ್ಸೂರು ಸ್ವಾಗತಿಸಿ, ಶಾಲಾ ನಾಯಕಿ ನಿಖಿತಾ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.
Advertisement
Advertisement