ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಆಗಮಿಸಿರುವುದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದೆ ಇಲ್ಲಿಗೆ ತಾನು ಬಾರದಿದ್ದರೆ ತನ್ನ ಜೀವನದಲ್ಲಿ ನಷ್ಟವಾಗುತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ. ಕುಮಾರ ಸ್ವಾಮಿ ಹೇಳಿದರು.
ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ಶನಿವಾರ ಕ್ರೀಡೋತ್ಸವ ವೀಕ್ಷಿಸಿ ಮಾತನಾಡಿದರು.
ಶಾಲೆಯ ಸಂಸ್ಥಾಪಕಾರದ,ಡಾ.ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡಿತ್ತಿರುವ ಕೊಡುಗೆ ಅಪಾರವಾಗಿದೆ. ದೇಶದ ಸಂಸ್ಕೃತಿ ಹೊಂದಿರುವ ಗುರುಕಲ ಪರಂಪರೆ, ಹಿರಿಯರಿಗೆ ಗೌರವ, ಸಂಸ್ಕಾರ,ಮಕ್ಕಳಿಗೆ ಶಿಸ್ತಿನ ಬದುಕು,ದೇಶದ ಸಾಂಸ್ಕೃತಿಕ ಪರಿಚಯವನ್ನು ಈ ವಿದ್ಯಾ ಸಂಸ್ಥೆಯಲ್ಲಿ ನೀಡುತ್ತಿರುವುದು ಅಭಿನಂದನೀಯವಾಗಿದೆ ಎಂದ ಅವರು ಜ್ಞಾನ ,ಬುದ್ದಿ,ಮಾನವೀಯತೆಯ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಎಂದರು.
ಬಾಲ್ಯದಲ್ಲಿತಾನು ಶ್ರೀರಾಮನ ಭಜನೆಯನ್ನು ಮಾಡುತ್ತಿದ್ದ ದಿನವನ್ನು ಕ್ರೀಡೋತ್ಸವ ಮತ್ತೆ ನೆನಪಿಸಿದೆ.
ಹಿಂದಿನ ಸಾಂಸ್ಕೃತಿಕ ಕಲೆಗಳಿಂದ ಮೊದಲ್ಗೊಂಡು ಇಂದಿನ ಚಂದ್ರಯಾನ-3 ರವರೆಗಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಅದ್ಬುತವಾಗಿ ಮಕ್ಕಳು ಪ್ರದರ್ಶಿಸಿದ್ದಾರೆ ಎಂದ ಅವರು ಬಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ದ ದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮೂಲಕ ಕೊಡುತ್ತಿರುವ ಹಾಗೂ ಸರಕಾರದ ಕಣ್ತೆರಸುವ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಡಾ.ಭಟ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಹಿಂದೆ ಡಾ.ಭಟ್ ಅವರ ಬಗ್ಗೆ ಮಾಡಿದ್ದ ಟೀಕೆ ಪ್ರತಿಕ್ರಿಯೆಗಳ ಮನಸ್ಥಿತಿ ಇಂದು ಬದಲಾಗಿದೆ.ನನ್ನನ್ನು ದಾರಿ ತಪ್ಪಿಸಿದ ಕಾರ್ಯಕ್ಕೆ ವಿಷಾಧ ವ್ಯಕ್ತಪಡಿಸುತ್ತೆನೆ ಎಂದ ಕುಮಾರಸ್ವಾಮಿ, ಸಂಸ್ಕೃತಿಯ ಕಲಿಸುವ ಶಿಕ್ಷಣ ಪ್ರತಿಗ್ರಾಮದ ಶಾಲೆಗಳಲ್ಲಿ ಸಿಗಲು ಈ ಶಿಕ್ಷಣ ಸಂಸ್ಥೆ ಪ್ರರೇಣೆಯಾಗಿದೆ ಎಂದರು.
ಶ್ರೀ ರಾಮ ವಿದ್ಯಾಕೇಂದ್ರದ ಸಂಸ್ಥಾಪಕ ಡಾ. ಪ್ರಭಾಕರ ಭಟ್ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಕಲ್ಲಡ್ಕ ಎನ್ನುವ ಹಿಂದುಳಿದ ಪ್ರದೇಶದಲ್ಲಿ 40 ವರ್ಷಗಳ ಹಿಂದೆ ಶ್ರೀರಾಮ ವಿದ್ಯಾಸಂಸ್ಥೆ ಪ್ರಾರಂಭವಾಯಿತು. ಶಿಕ್ಷಣದಲ್ಲಿ ಭಾರತೀಯತೆ ಇಲ್ಲ ಎನ್ನುವ ಕಾಲಘಟ್ಟದಲ್ಲಿ ಧರ್ಮ, ಸಂಸ್ಕೃತಿ, ಜೀವನ ಮೌಲ್ಯಗಳುಳ್ಳ ಚಿಂತನೆಯಿಂದ ಈ ವಿದ್ಯಾಸಂಸ್ಥೆ ಆರಂಭಗೊಂಡಿದೆ ಎಂದರು.
ರಾಜ್ಯದಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯಂತ ಹೆಚ್ಚು ಮಕ್ಕಳು ಕಲಿಯುವ ಶಾಲೆ ಇದಾಗಿದ್ದು
ಶಾಸ್ತ್ರದ ಚಿಂತನೆಯನ್ನು ಕೊಡುವುದರ ಜೊತೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಸ್ತ್ರದ ಚಿಂತನೆಯನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ. ಇಲ್ಲಿಗೆ ಬಂದು ಕ್ರೀಡೋತ್ಸವ ನೋಡಿದವರು ವೈಚಾರಿಕ ಚಿಂತನೆಯ ಮೂಲಕ ಹೊರ ಹೋಗಬೇಕು ಎನ್ನುವುದು ನಮ್ಮಆಶಯ ಎಂದು ತಿಳಿಸಿದರು.
ಕೇಂದ್ರದ ಸಚಿವ, ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್, ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಸದಾಶಿವ ಸ್ವಾಮೀಜಿ,, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಕರ್ನಾಲ್ ಅಶೋಕ್ ಕಿಣಿ
ನಿವೃತ್ತ ವಿಜ್ಞಾನಿ ಪ್ರೋ ನಾಗೇಂದ್ರಯ್ಯ
ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಕೋಟ ಶ್ರೀನಿವಾಸ ಪೂಜಾರಿ, ನಾಗರಾಜ ಶೆಟ್ಟಿ, ಜೆ. ಕೃಷ್ಣಪಾಲೇಮಾರ್ ಶಾಸಕರಾದ ಧೀರಜ್ ಮುನಿರಾಜ, ಗುರುರಾಜ್ ಗಂಟಿಹೊಳಿ, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಉದ್ಯಮಿಗಳಾದ ಸದಾಶಿವ ಶೆಟ್ಟಿ ಕನ್ಯಾನ, ಯದುನಾರಾಯಣ ಶೆಟ್ಟಿ, ವಿಜಯಕುಮಾರ್, ಸುಖಾನಂದಶೆಟ್ಟಿ, ಸುಧಾಕರ್, ಪತ್ರಕರ್ತ, ಜಿತೇಂದ್ರ ಕುಂದೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾಸಂಸ್ಥೆ ಯ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಹಾಜರಿದ್ದರು.
ವಿದ್ಯಾಸಂಸ್ಥೆಯ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ ತರಗತಿಗಳ
3500 ವಿದ್ಯಾರ್ಥಿಗಳಿಂದ ಸಂಚಲನ, ಶಿಶುನೃತ್ಯ, ಘೋಷ್ ಪ್ರದರ್ಶನ, ಜಡೆ ಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ಕೋಲ್ಮಿಂಚು, ನೃತ್ಯ ಭಜನೆ, ತಿರುಗುವ ಮಲ್ಲಕಂಬ, ಟಿಕ್ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ ಸಮತೋಲನ, ಪ್ರೌಢ ಸಾಮೂಹಿಕ ಮೊದಲಾದ ಕ್ರೀಡಾ ಪ್ರದರ್ಶನಗಳು ನಡೆಯಿತು.