
ಬಂಟ್ವಾಳ: ಬಿ.ಸಿ.ರೋಡಿನ ಮುನ್ಸಿಫ್ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆದ ಲೋಕಾ ಅದಾಲತ್ನಲ್ಲಿ ಬಂಟ್ವಾಳ ಪುರಸಭೆಗೆ ಸಾರ್ವಜನಿಕರಿಂದ ಸುಮಾರು


33,62,284 ರೂಪಾಯಿ ಬಾಕಿ ವಸೂಲಾತಿಯಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜೆಂಎಫ್ಸಿ ಭಾಗ್ಯಮ್ಮ, ಪ್ರಧಾನ ಸಿವಿಲ್ ನ್ಯಾಯಧೀಶ ಚಂದ್ರಶೇಖರ್ ತಳವಾರ ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಮೂರ್ತಿ ಅವರ ಉಪಸ್ಥಿತಿಯಲ್ಲಿ ಲೋಕಾ ಅದಾಲತ್ ನಡೆದಿದ್ದು ಬಂಟ್ವಾಳ ಪುರಸಭೆಗೆ ನೀರಿನ ತೆರಿಗೆ 19,14,881 ರೂಪಾಯಿ, ಮನೆ ತೆರಿಗೆ 5,34,290 ರೂಪಾಯಿ. ಕಟ್ಟಡ ಬಾಡಿಗೆ 9,13,613 ರೂಪಾಯಿ ವಸೂಲಾತಿಯಾಗಿದೆ.
ಈ ಹಿಂದೆಯೂ ಲೀನಾಬ್ರಿಟ್ಟೋ ಅವರು ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ಸಂದರ್ಭ ಲೋಕಾ ಅದಾಲತ್ ಮೂಲಕ ಸುಮಾರು 10 ಲಕ್ಷ ರೂಪಾಯಿ ತೆರಿಗೆ ಹಣ ವಸೂಲಾತಿಯಾಗಿತ್ತು.


ಈ ಬಾರಿ ಅತಿ ಹೆಚ್ಚು ಮೊತ್ತ ಬಾಕಿ ವಸೂಲಾತಿಯಾಗಿದ್ದು ಪುರಸಭೆಯ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಸಮುದಾಯ ಸಂಘಟಕಿ ಉಮಾವತಿ ಆರೋಗ್ಯ ನಿರೀಕ್ಷಕ ರತ್ನಪ್ರಸಾದ್, ಸಿಬ್ಬಂದಿಗಳಾದ ಅಬ್ದುಲ್ ರಝಾಕ್, ಜಯಶ್ರೀ, ರಮಣಿ ಮೊದಲಾದವರು ಉಪಸ್ಥಿತರಿದ್ದರು.
