ಬಂಟ್ವಾಳ: ಮೆಲ್ಕಾರ್ನ ನರಹರಿ ಪರ್ವತ ಶ್ರೀ ಸದಾಶಿವ ದೇವಾಲಯದ ಜೀರ್ಣೋದ್ಧಾರದ ಪ್ರಯುಕ್ತ ಸಹಸ್ರ ಸೀಯಾಳಾಭಿಷೇಕ ಸೋಮವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
Advertisement
Advertisement
Advertisement
ಕಳೆದ ಮೇ.೨೬ರಂದು ಶ್ರೀ ಕ್ಷೇತ್ರದಲ್ಲಿ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಪ್ರಶ್ನಾಚಿಂತನೆಯು ನಡೆದಿದ್ದು ಅದರಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಅಮ್ಟೂರು, ಗೋಳ್ತಮಜಲು, ಬೊಂಡಾಲ, ಶಂಭೂರು, ಪಾಣೆಮಂಗಳೂರು ಗ್ರಾಮಗಳ ಪ್ರತೀ ಮನೆಗಳಲ್ಲಿ ನಗರ ಭಜನೆಯನ್ನು ನಡೆಸಿ ಶ್ರೀ ದೇವರಿಗೆ ಸೀಯಾಳಾಭಿಷೇಕ ನಡೆಸಲಾಗಿದೆ. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ| ಪ್ರಶಾಂತ ಮಾರ್ಲ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ತಹಶೀಲ್ದಾರ್ ಎಸ್.ಬಿ.ಕೂಡಲಗಿ, ಉಪತಹಶೀಲ್ದಾರ್ ನವೀನ್ ಬೆಂಜನಪದವು ಆಡಳಿತ ಸಮಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Advertisement