
ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳದ ಸಹಕಾರದೊಂದಿಗೆ, ಮಂಗಳೂರಿನ ಎನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯು ಡಿ.3 ಆದಿತ್ಯವಾರ ಬಿ.ಸಿ.ರೋಡಿನ ಖಾಸಗಿ ಬಸ್ಸು ನಿಲ್ದಾಣದ ಪಕ್ಕ, ಮೇಲ್ಸೆತುವೆ ಕೆಳಗೆ ಸಂಪೂರ್ಣವಾಗಿ ಲಸಿಕೆಗಳನ್ನು ಕೊಟ್ಟ ದೇಸಿ ತಳಿಯ ನಾಯಿ ಹಾಗೂ ಬೆಕ್ಕು ಮರಿಗಳನ್ನು ಉಚಿತವಾಗಿ ದತ್ತು ನೀಡಲಿದ್ದಾರೆ. ಮರಿಗಳನ್ನು ದತ್ತು ಪಡೆಯುವವರು ತಮ್ಮ ಆಧಾರ್ ಕಾರ್ಡ್ ಖಡ್ಡಾಯವಾಗಿ ನೀಡಬೇಕು, ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶಿಬಿರ ನಡೆಯಲಿದ್ದು ಹಣ ಕೊಟ್ಟು ಪ್ರಾಣಿಗಳನ್ನು ಪಡೆಯುವ ಬದಲು ರಕ್ಷಿಸಿದ ದೇಸಿಯ ಪ್ರಾಣಿಗಳಿಗೆ ಬದುಕನ್ನು ಕೊಡಲು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಕ್ಲಬ್ ಬಂಟ್ವಾಳ ಹಾಗೂ ಎನಿಮಲ್ ಕೇರ್ ಟ್ರಸ್ಟ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

