
ಬಂಟ್ವಾಳ: ಜೆಸಿಐ ಬಂಟ್ವಾಳದ 2024 ರ ಸಾಲಿನ ಅಧ್ಯಕ್ಷರಾಗಿ ರಶ್ಮಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶ್ರೀನಿವಾಸ್ ಅರ್ಬಿಗುಡ್ಡೆ, ಕೋಶಾಧಿಕಾರಿಯಾಗಿ ಮನೋಜ್ ಕನಪಾಡಿ, ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಕಿಶೋರ್ ಆಚಾರ್ಯ ಯೋಗೀಶ್, ಉಮೇಶ್ ಪೂಜಾರಿ, ಶಿವರಾಮ್ ಮರ್ತಾಜೆ, ನಾರಾಯಣ ಸಿ. ಪೆರ್ನೆ, ಲೇಡಿ ಜೇಸಿ ಸಂಯೋಜಕರಾಗಿ ಆಶಾಮಣಿ ಡಿ. ರೈ, ಜೂನಿಯರ್ ಜೇಸಿ ಸಂಯೋಜಕರಾಗಿ ರೋಶನ್ ರೈ, ಗೋಗ್ರೀನ್ ನಿರ್ದೇಶಕರಾಗಿ ವಚನ್ ಶೆಟ್ಟಿ, ಬ್ಲಡ್ ಡೊನೇಷನ್ ನಿರ್ದೇಶಕರಾಗಿ ರೋಷನ್, ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ನಿರ್ದೇಶಕರಾಗಿ ಕಿರಣ್, ಸಾಂಸ್ಕೃತಿಕ ನಿರ್ದೇಶಕರಾಗಿ ನಾಗೇಶ್, ದಾನ್ ಕಾರ್ಯಕ್ರಮ ನಿರ್ದೇಶಕರಾಗಿ ವೆಂಕಟೇಶ್ ಕೃಷ್ಣಾಪುರ ಆಯ್ಕೆಯಾಗಿದ್ದಾರೆ.

