ಮಂಗಳೂರು: ಆರೋಗ್ಯ, ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವೆಗಳ ಮೂಲಕ ಜನಪ್ರಿಯತೆ ಪಡೆದು, ಬೃಹತ್ ವೈದ್ಯಕೀಯ ಶಿಬಿರ ಹಾಗೂ ಆರೋಗ್ಯ ಜನಜಾಗೃತಿ ಸಮ್ಮೇಳನಗಳನ್ನು ನಡೆಸಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಪ್ರಸ್ತುತ ಎರಡು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಸೇವಾ ಸಂಸ್ಥೆ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ(ರಿ)ದ ಅಂಗ ಸಂಸ್ಥೆಗಳಲ್ಲಿ ಒಂದಾದ ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದು, ಇಂತಹ ವಿಶೇಷ ಸೇವೆ ನೀಡುವ ಕರಾವಳಿ ಕರ್ನಾಟಕದ ಏಕೈಕ ಚೊಚ್ಚಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಪ್ಪತ್ತಕ್ಕೂ ಅಧಿಕ ವರ್ಷಗಳಿಂದ ವೈದ್ಯಕೀಯ ಶಿಕ್ಷಕನಾಗಿ, ಆರೋಗ್ಯ ಸಲಹಾ ತಜ್ಞನಾಗಿ, ಕುಟುಂಬ ವೈದ್ಯನಾಗಿ , ವೈದ್ಯ ಸಂಘಟನೆಗಳ ರಾಜ್ಯ ನಾಯಕನಾಗಿ ಸೇವೆ ಮಾಡಿದ ಡಾ| ಎಂ. ಅಣ್ಣಯ್ಯಕುಲಾಲ್ ಉಳ್ತೂರು ಅವರು ಈ ಸಂಸ್ಥೆಯನ್ನ ಮುನ್ನೆಡೆಸಿಕೊಂಡು ಬರುತಿದ್ದಾರೆ.
ಅವಿಭಜಿತ ದ.ಕ. ಜಿಲ್ಲೆಯ ಕಾಸರಗೋಡು, ಮಂಗಳೂರು, ಉಡುಪಿ, ಕುಂದಾಪುರ, ಉತ್ತರಕನ್ನಡಗಳಲ್ಲದೇ, ಕೊಡಗು ಶಿವಮೊಗ್ಗ, ಚಿಕ್ಕಮಗಳೂರು, ಮತ್ತು ಉತ್ತರಕರ್ನಾಟಕದ ಜಿಲ್ಲೆಗಳಿಂದಲೂ ರೋಗಿಗಳು, ಜನಸಾಮಾನ್ಯರು ಈ ಕೇಂದ್ರದ ಮೂಲಕ ವೈದ್ಯಕೀಯ ಸಲಹೆ, ಸೂಚನೆಗಳನ್ನು ಪಡೆಯುತ್ತಿದ್ದಾರೆ.
ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಹಾಗೂ ಶ್ರೀನಿವಾಸ್ ಯೂನಿವರ್ಸಿಟಿಯ ಮುಖ್ಯ ವೈದ್ಯಾಧಿಕಾರಿ ಮತ್ತು ಪ್ರಾಧ್ಯಾಪಕನಾಗಿರುವ ಇವರು ಮಂಗಳೂರಿನ ಮಂಗಳಾದೇವಿ ಮತ್ತು ಪಡೀಲ್ನ ಕುಲಾಲ್ ಹೆಲ್ತ್ ಸೆಂಟರ್ನಲ್ಲಿ ರೋಗಿಗಳ ಅನುಕೂಲಕ್ಕಾಗಿ ಲಭ್ಯರಿರುತ್ತಾರೆ. ದೂರವಾಣಿ ಕರೆ ಅಥವಾ ವಾಟ್ಸಪ್ಪ್ ಗಳ ಮೂಲಕ ಯಾವುದೇ ಮಾರ್ಗದರ್ಶನ ಮಾಹಿತಿಯನ್ನ ನೀಡಲಾಗುದಿಲ್ಲ, ಬದಲಾಗಿ ಖುದ್ದಾಗಿ ರೋಗಿಗಳು ಎಲ್ಲಾ ದಾಖಲೆಗಳ ಜೊತೆ ಬಂದು ಮಾಹಿತಿ ಮತ್ತು ಮಾರ್ಗದರ್ಶನ ಪಡೆಯ ಬಹುದಾಗಿದೆ ಎಂದು ಡಾ| ಅಣ್ಣಯ್ಯ ಕುಲಾಲ್ ತಿಳಿಸಿದ್ದಾರೆ.
ಒಬ್ಬ ಕುಟುಂಬ ವೈದ್ಯನಾಗಿ ನನಗೆ ಹಲವಾರು ರೋಗಿಗಳಿಂದ ವೈದ್ಯಕೀಯ ಸೌಲಭ್ಯಗಳ ಸಲಹೆಗಾಗಿ ಪ್ರತಿದಿನ ನೂರಾರು ದೂರವಾಣಿ ಕರೆಗಳು ಬರುತ್ತಿದೆ. ಮಂಗಳೂರಿನಲ್ಲಿ ಸಾಕಷ್ಟು ಆಸ್ಪತ್ರೆಗಳು ಇದ್ದರೂ ಕೂಡ ಅಲ್ಲಿ ಸಿಗುವ ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ರೋಗಿಗಳಿಗೆ ಅಥವಾ ಅವರ ಮನೆಮಂದಿಗೆ ಅರಿವಿರುವುದಿಲ್ಲ. ಅಂತವರಿಗೆ ನಮ್ಮ ಈ ಸಂಸ್ಥೆಯ ಮೂಲಕ ಸೂಕ್ತ ಸಲಹೆ, ಮಾರ್ಗದರ್ಶನವನ್ನು ನೀಡಿ ಸರಿಯಾದ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ.ದೇಶದ ಬಹುತೇಕ ನಗರಗಳಲ್ಲಿ ಎರಡನೇ ಅಭಿಪ್ರಾಯ ಕೇಂದ್ರಗಳು ಇದೆ, ಬಹುತೇಕ ಆಸ್ಪತ್ರೆಗಳು ತಮ್ಮದೇ ಸ್ವಂತ ಸಲಹಾ ಘಟಕಗಳನ್ನು ಹೊಂದಿದೆ. ಅದರಂತೆ ಮಂಗಳೂರು ಹಾಗೂ ಅದರ ಸುತ್ತಮುತ್ತಲಿನ ಪರಿಸರದ ಜನರಿಗೆ, ರೋಗಿಗಳಿಗೆ ಸಮರ್ಪಕ ಚಿಕಿತ್ಸೆಗೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ಈ ಸಂಸ್ಥೆ ಪ್ರಾಮಾಣಿಕ ಸೇವೆ ನೀಡುತ್ತಾ ಬಂದಿದೆ ಎನ್ನುವುದು ಡಾ| ಅಣ್ಣಯ್ಯ ಕುಲಾಲ್ ಅವರ ಮನದಾಳದ ಮಾತು. ಈಗಾಗಲೇ ಹಲವಾರು ಮಂದಿ ಈ ಸಂಸ್ಥೆಯ ಮೂಲಕ ಆರೋಗ್ಯ ಸಲಹೆ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ. ಇದೀಗ ಮೂರನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಿನ ಸೇವೆಯನ್ನು ನೀಡುವ ಚಿಂತನೆ ಸಂಸ್ಥೆಯ ರುವಾರಿ ಡಾ. ಅಣ್ಣಯ್ಯ ಕುಲಾಲ್ ಅವರಲ್ಲಿದೆ.