
ಬಂಟ್ವಾಳ: ಜೆಸಿಐ ಬಂಟ್ವಾಳ ವತಿಯಿಂದ ಬಂಟ್ವಾಳ ತಾಲೂಕಿನ ಮಕ್ಕಳಿಗಾಗಿ ಆನ್ಲೈನ್ ಗಣೇಶ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.


1ರಿಂದ 4ನೇ ತರಗತಿ ಮಕ್ಕಳಿಗೆ ಬಾಲಗಣೇಶ, 5ರಿಂದ7 ತರಗತಿ ಮಕ್ಕಳಿಗೆ ಮೂರ್ತಿ ಗಣೇಶ, 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚೌತಿಯ ಸಂಭ್ರಮದ ಚಿತ್ರವನ್ನು ಬಿಡಿಸಬೇಕಾಗಿದ್ದು ಎ4 ಅಳತೆಯ ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸಿ ಚಿತ್ರದ ಕೆಳಗೆ ಮೊಬೈಲ್ ಸಂಖ್ಯೆ ನಮೂದಿಸಬೇಕು, ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಇದ್ದು ಬಿಡಿಸಿದ ಚಿತ್ರವನ್ನು ಸೆ. 10 ರ ಒಳಗಾಗಿ 9164977096 ಈ ದೂರವಾಣಿಯ ವಾಟ್ಸಫ್ ಗೆ ಕಳುಹಿಸುವಂತೆ ಕೋರಲಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದ್ದು ವಿಜೇತರಿಗೆ ಸೆ. 15ರಂದು ನಡೆಯುವ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಬಹುಮಾನ ನೀಡಲಾಗುವುದು, ಹಾಗೂ ಅದೇ ಚಿತ್ರ ವಿಜೇತ ಮಕ್ಕಳ ಚಿತ್ರವನ್ನು ಪ್ರದರ್ಶಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ 9449167316, 9008041979 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.