
ಬಂಟ್ವಾಳ: ಸರಕಾರದ ಸುತ್ತೋಲೆಯಂತೆ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಆ.30 ರಂದು ಸರ್ಕಾರದ ಮಟ್ಟದಲ್ಲಿ ಮೈಸೂರಿನಲ್ಲಿ ಪೂರ್ವಾಹ್ನ 12 ರಿಂದ ಅಪರಾಹ್ನ 1 ಗಂಟೆವರೆಗೆ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಫಲಾನುಭವಿಗಳು ವೀಕ್ಷಿಸಲು ರಾಜ್ಯದ ವಿವಿಧ ಕಡೆಗಳಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರದ ಆದೇಶಿಸಿದೆ.

ಬಂಟ್ವಾಳ ಪುರಸಭಾ ವ್ಯಾಪ್ತಿಯ 4 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದ್ದು ಪುರಸಭಾ ಕಛೇರಿ ಸಭಾಂಗಣ, ಕೈಕಂಬ ಸೂರ್ಯವಂಶ ಕಟ್ಟಡದ ಸಭಾಂಗಣ, ಬಿ.ಸಿ.ರೋಡು ರಂಗೋಲಿ ಹೊಟೇಲ್ ಸಭಾಂಗಣ, ಮೆಲ್ಕಾರ್ ಬಿರ್ವ ಸೆಂಟರ್ ಸಭಾಂಗಣದಲ್ಲಿ ಏಕಕಾಲಕ್ಕೆ ಪ್ರಸಾರ ನಡೆಯಲಿದೆ. ಈ ಕಾರ್ಯಕ್ರಮವು ಮೈಸೂರಿನಿಂದ ಫಲಾನುಭವಿಗಳು ವೀಕ್ಷೀಸಲು ಮೇಲ್ಕಾಣಿಸಿದ ಕೇಂದ್ರಗಳಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಪುರಸಭೆಯ ಪ್ರಕಟಣೆ ತಿಳಿಸಿದೆ.
