
ಬಂಟ್ವಾಳ: ತಾಲೂಕು ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ ಇದರ ವತಿಯಿಂದ ಉಚಿತ ವೃತ್ತಿ ಮಾರ್ಗದರ್ಶನ, ಉದ್ಯೋಗ ನೋಂದಣಿ ಕಾರ್ಡ್ ಹಾಗೂ ಸಸಿ ವಿತರಣ ಕಾರ್ಯಕ್ರಮ ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಹಿರಿಯ ತೋಟಗಾರಿಕಾ ನಿರ್ದೇಶಕ ಜೋ ಪ್ರದೀಪ್ ಡಿಸೋಜಾ ಉದ್ಘಾಟಿಸಿ ಮಾತನಾಡಿ ಗಿಡಗಳು ಹೇಗೆ ಸದೃಢವಾಗಿ ಬೆಳೆಯಲು ನೀರು, ಗೊಬ್ಬರ, ಪೋಷಕಾಂಶಗಳು ಅಗತ್ಯವೋ ಅದೆ ರೀತಿ ಸಮುದಾಯದ ಯುವಕ ಯುವತಿಯರಿಗೆ ಸರಿಯಾದ ಮಾರ್ಗದರ್ಶನ ನೀಡಿದಾಗ ಅವರು ಸಮಾಜದಲ್ಲಿ ಉತ್ತಮ ಉದ್ಯೋಗ ಪಡೆದು ಸದೃಢವಾದ ಜೀವನ ನಡೆಸಲು ಸಾದ್ಯವಿದೆ. ಉತ್ತಮ ಪರಿಶ್ರಮದಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಸತೀಶ್ ಅರಳ ಅಧ್ಯಕ್ಷತೆ ವಹಿಸಿ ಮಾತನಾಡಿ ಒಂದೇ ಸೂರಿನಡಿ ಈ ಎಲ್ಲಾ ಕಾರ್ಯಕ್ರಮವನ್ನು ಆಯೋಜಿಸಿ ಸಮುದಾಯದ ಯುವಕ ಯುವತಿಯರಿಗೆ ಉದ್ಯೋಗದ ಸರಿಯಾದ ಮಾಹಿತಿ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಉಪನೋಂದಣಾಧಿಕಾರಿ ಕವಿತಾ ಡಾ. ಅಂಬೇಡ್ಕರ್ ಭಾವ ಚಿತ್ರಕ್ಕೆ ಹಾರಾರ್ಪಣೆ ಮಾಡಿದರು.



ವೇದಿಕೆಯಲ್ಲಿ ವಲಯಾರಣ್ಯಧಿಕಾರಿ ರಾಜೇಶ್ ಬಳಿಗಾರ್, ಸಿಡಿಪಿಓ ಶೀಲಾವತಿ, ಕಾರ್ಮಿಕ ಕಲ್ಯಾಣಾಧಿಕಾರಿ ಮರ್ಲಿನ್ ಗ್ರೇಸಿ ಡಿಸೋಜಾ ವಕೀಲರಾದ ಉಮೇಶ್ ಕುಮಾರ್ ವೈ, ತುಳಸಿದಾಸ್ ಪತ್ರಕರ್ತ ಸಂದೀಪ್ ಸಾಲ್ಯಾನ್, ಪುರಸಭೆಯ ಪ್ರಥಮ ದರ್ಜೆ ಸಹಾಯಕ ಅಬ್ದುಲ್ ರಝಾಕ್ ತಾ.ಪಂ. ವ್ಯವಸ್ಥಾಪಕಿ ಶಾಂಭವಿ ರಾವ್. ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಇಲಾಖೆಯ ಕೌನ್ಸಿಲರ್ ಹಾಗೂ ತರಬೇತುದಾರರಾದ ಮಂಜೂಷ ಉಪಸ್ಥಿತರಿದ್ದರು. ಕಾರ್ಯದರ್ಶಿ ವೆಂಕಟೇಶ್ ಕೃಷ್ಣಾಪುರ ಸ್ವಾಗತಿಸಿದರು, ಪ್ರೇಮ್ರಾಜ್ ದ್ರಾವಿಡ್ ವಂದಿಸಿದರು, ರಾಜೀವ ಕಕ್ಯಪದವು ಕಾರ್ಯಕ್ರಮ ನಿರೂಪಿಸಿದರು
