ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಫರಂಗಿಪೇಟೆ ಇದರ ಆಶ್ರಯದಲ್ಲಿ18 ನೇ ವರ್ಷದ ವರಮಹಾಲಕ್ಷ್ಮೀ ವ್ರತಾಚರಣೆ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ನಡೆಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವರಮಹಾಲಕ್ಷ್ಮೀ ವ್ರತದ ಸಂಕಲ್ಪ ತೊಟ್ಟು ಪೂಜೆಯಲ್ಲಿ ಪಾಲ್ಗೊಂಡರು.
ಪೊಳಲಿ ಸುಬ್ರಹ್ಮಣ್ಯ ತಂತ್ರಿ ನೇತೃತ್ವದಲ್ಲಿ ಅರ್ಚಕರ ತಂಡ ಪೌರೋಹಿತ್ಯ ವಹಿಸಿದ್ದರು.
ಮನೋಜ್ ತುಪ್ಪೆಕಲ್ಲು ಕವಿತಾ ದಂಪತಿ ಪೂಜಾ ಕಾರ್ಯದಲ್ಲಿ ಭಾಗಿಯಾದರು
ಸೇವಾರ್ಥಿಗಳಿಗೆ ಪ್ರಸಾದ,ಹಸಿರು ಬಳೆ, ರವಿಕೆ ಕಣ, ದಾರ ಸಹಿತ ಸುವಸ್ತುಗಳನ್ನು ನೀಡಲಾಯಿತು. ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ, ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ಭಾಸ್ಕರ ಚೌಟ
ಪದ್ಮನಾಭ ಕದೆಬೆಟ್ಟು, ದಿನಕರ ಕರ್ಕೆರ, ವಿಕ್ರಂ ಬರ್ಕೆ, ಪ್ರಶಾಂತ್ ತುಂಬೆ, ಸಂಧ್ಯಾ ಜಯರಾಜ್ ತುಪ್ಪೆಕಲ್ಲು
ಪ್ರಮೀಳಾ ವಿ. ಪೂಂಜ ದೇವಸ್ಯ, ವಿಜಯ ಎನ್. ಶೆಟ್ಟಿ ಸುಜೀರು, ಕಮಲಾಕ್ಷಿ ಕೃಷ್ಣಪ್ಪ ದೋಟ ಮೇರಮಜಲು, ಸುಮಿತ್ರ ಸುರೇಶ್ ಕುಂಪಣಮಜಲು, ಅಮಿತಾ ವರದರಾಜ್ ಧರ್ಮಗಿರಿ, ಗೀತಾ ಧರ್ಮರಾಜ್ ಮೇರಮಜಲು, ಸುಲೋಚನಾ ಎಸ್.ಶೆಟ್ಟಿ ದೇಮುಂಡೆ ತುಂಬೆ, ಪದ್ಮಲತಾ ದಿವಾಕರ ಮುದಲ್ಮೆ ತುಂಬೆ ಉಪಸ್ಥಿತರಿದ್ದರು. ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಮಹಾಬಲೇಶ್ವರ ಹೆಬ್ಬಾರ್, ಮನೋ ವೈದ್ಯ ಡಾ.ರವೀಶ್ ತುಂಗ ಭಾಗವಹಿಸಿದ್ದರು.