ಬಂಟ್ವಾಳ: ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯ ಬೆಳ್ಳಿಹಬ್ಬದ ಪ್ರಯುಕ್ತ ಬಂಟ್ವಾಳ ಬೆಳ್ಳಿ ಹಬ್ಬ ಮಹೋತ್ಸವ ಸಮಿತಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಭಾನುವಾರ ಸಂಜೆ ನಡೆಯಿತು.
ಬೆಳ್ಳಿಹಬ್ಬ ಮಹೋತ್ಸವ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಹೊರೆಕಾಣಿಕೆ ಮರವಣಿಗೆಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಸ್ಥಾನದ ಬಳಿ ಚಾಲನೆ ನೀಡಿದರು. ಈ ಸಂದರ್ಭ ಮಾಜಿ ಸಚಿವ ಬಿ. ರಮಾನಾಥ ರೈ, ಕೇಂದ್ರ ಸಮಿತಿ ಕಾರ್ಯಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು, ತಾಲೂಕು ಸಮಿತಿ ಕಾರ್ಯಧ್ಯಕ್ಷ ಸುಧಾಕರ ಸಾಲ್ಯಾನ್, ತಾಲೂಕು ಸಮಿತಿ ಕಾರ್ಯದರ್ಶಿ ನಾರಾಯಣ ಸಿ. ಪೆರ್ನೆ, ಜಿಲ್ಲಾ. ಪಂಚಾಯತಿ ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್, ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ ಜೈನ್ ಪ್ರಮುಖರಾದ ಮಚ್ಚೇಂದ್ರ ಸಾಲ್ಯಾನ್, ಸದಾಶಿವ ಬಂಗೇರ, ಬೇಬಿ ಕುಂದರ್, ಜನಾರ್ದನ ಬೊಂಡಾಲ, ರಮೇಶ್ ಸಾಲ್ಯಾನ್, ನವೀನ್ ಶೆಟ್ಟಿ, ಎಚ್ಕೆ ನಯನಾಡು, ಪ್ರಕಾಶ್ಜೈನ್, ಕರುಣೇಂದ್ರ ಪೂಜಾರಿ ಕೊಂಬರ ಬೈಲು, ಚಂದ್ರಹಾಸ ಪಲ್ಲಿಪ್ಪಾಡಿ
ಕೇಶವ ಪೂಜಾರಿ, ಮೋಹನ್ ಶೆಟ್ಟಿ ಪಂಜಿಕಲ್ಲು, ಕೇಶವ ಬಾಳೆಹಿತ್ಲು, ಸಂತೋಷ್ ಮರ್ತಾಜೆ
ಸತೀಶ್ ಕುಲಾಲ್ ಜಕ್ರಿಬೆಟ್ಟು ಮತ್ತಿತರ ಗಣ್ಯರು ಭಾಗವಹಿಸಿದ್ದರು