ಬಂಟ್ವಾಳ: ತಾಲೂಕು ಕುಲಾಲ ಸುಧಾರಕ ಸಂಘ ಇದರ ೪೪ನೇ ವಾರ್ಷಿಕ ಮಹಾಸಭೆ ಜುಲೈ 23ರಂದು ಭಾನುವಾರ ಬೆಳಿಗ್ಗೆ ಗಂಟೆ 11ಕ್ಕೆ ಅಧ್ಯಕ್ಷ ನಾರಾಯಣ್ ಸಿ. ಪೆರ್ನೆಯವರ ಅಧ್ಯಕ್ಷತೆಯಲ್ಲಿ ಪೊಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 3.30ಕ್ಕೆ ನಡೆಯುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕುಲಾಲರ ಮಾತ್ರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಬೆಳ್ತಂಗಡಿ ತಾಲೂಕು ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸೋಮಯ ಮೂಲ್ಯ ಹನೈನಡೆ, ಉದ್ಯಮಿ ದಿವಾಕರ ಬಂಗೇರ, ಬಂಟ್ವಾಳ ತಾಲೂಕು ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಬಿ. ನಾವೂರ ಭಾಗವಹಿಸಲಿದ್ದಾರೆ.
ಪ್ರಶಸ್ತಿ ಪುರಸ್ಕಾರ :
ಬಂಟ್ವಾಳ ಕುಲಾಲ ಸಂಘದ ಸ್ಫಾಪನೆಯಲ್ಲಿ ಸಹಕರಿಸಿದ ಗೋಪಾಲ ಸಾಲ್ಯಾನ್ ರವರಿಗೆ ಅಮೂಲ್ಯ ರತ್ನ ಪ್ರಶಸ್ತಿ, ಕಟೀಲು ಮೇಳದ ಕಲಾವಿದ ಯಕ್ಷಗುರು ಅಶ್ವಥ್ ಕುಲಾಲ್ ಮಂಜನಾಡಿ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶಿವಾಲಯ ಇವರಿಗೆ ಕುಲಾಲ ರತ್ನ ಪ್ರಶಸ್ತಿ ಹಾಗೂ ಎಗ್ರಿಕಲ್ಚರಲ್ ಬಿಎಸ್ಸಿಯಲ್ಲಿ 39 ಶ್ರೇಣಿ ಅಂಕ ಮತ್ತು ಇಂಜಿನಿಯರಿಂಗ್ ನಲ್ಲಿ 130 ಶ್ರೇಣಿ ಅಂಕ ಪಡೆದ ವರ್ಷಿತ್ ಜೆ. ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಗಂಟೆ 2ಕ್ಕೆ ಕುಲಾಲ ಸೇವಾದಳ, ಮಹಿಳಾ ಘಟಕ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಿಂದ ಡ್ಯಾನ್ಸ್ ಡ್ಯಾನ್ಸ್ 2023 ಮತ್ತು ಸಂಜೆ 5ಕ್ಕೆ ಸಂಘದ ಸದಸ್ಯರು ಮತ್ತು ಹವ್ಯಾಸಿ ಕಲಾವಿದರಿಂದ ಮಹಿಮೆದ ಬಾಲೆ ಸಿರಿಕೃಷ್ಣೆ ತುಳು ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೇಶವ ಮಾಸ್ತರ್ ಮಾರ್ನಬೈಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.